ADVERTISEMENT

ಬ್ರಿಟನ್‌ನಲ್ಲಿ ಭಾರತ ವಿರೋಧಿ ಚಟುವಟಿಕೆ; ಮುಂಜಾಗ್ರತಾ ಕ್ರಮಕ್ಕೆ ಒತ್ತಾಯ

ಪಿಟಿಐ
Published 11 ಫೆಬ್ರುವರಿ 2022, 7:40 IST
Last Updated 11 ಫೆಬ್ರುವರಿ 2022, 7:40 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬ್ರಿಟನ್‌ನಲ್ಲಿ ತೀವ್ರಗಾಮಿ ಮತ್ತು ಮೂಲಭೂತ ವಾದಿಗಳಿಂದ ನಡೆಯುತ್ತಿರುವ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಗುರುವಾರ ಕಳವಳ ವ್ಯಕ್ತಪಡಿಸಿರುವ ಭಾರತವು, ಈ ಕುರಿತು ಎಚ್ಚರ ವಹಿಸಿ ಸೂಕ್ತ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ.

ಗುರುವಾರ ವರ್ಚುವಲ್ ಆಗಿ ನಡೆದ 4ನೇ ಭಾರತ-ಬ್ರಿಟನ್ ಗೃಹ ವ್ಯವಹಾರಗಳ ಸಂವಾದದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.

ಬಾಕಿ ಉಳಿದಿರುವ ಹಸ್ತಾಂತರ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲುಭಾರತೀಯ ಅಧಿಕಾರಿಗಳು ವಿನಂತಿ ಮಾಡಿದ್ದಾರೆ.

ವರ್ಧಿತ ಭದ್ರತಾ ಸಹಕಾರವನ್ನು ಕಾಪಾಡಿಕೊಳ್ಳಲು ಸಮ್ಮತಿ ಸೂಚಿಸಲಾಗಿದೆ ಎಂದು ಉಭಯ ದೇಶಗಳು ಬಿಡುಗಡೆ ಮಾಡಿದ ಜಂಟಿ ಪ್ರಕಟಣೆಯಲ್ಲಿ ತಿಳಿಸಿವೆ.

ಭದ್ರತೆ, ಸೈಬರ್ ಸೆಕ್ಯೂರಿಟಿ, ಹಸ್ತಾಂತರ ಪ್ರಕರಣ, ವಲಸೆ ಹಾಗೂ ಸಂಚಾರ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

ಭಾರತೀಯ ನಿಯೋಗವನ್ನು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಮತ್ತು ಬ್ರಿಟನ್ ನಿಯೋಗವನ್ನುಗೃಹ ಇಲಾಖೆಯ ಖಾಯಂ ಕಾರ್ಯದರ್ಶಿ ಮ್ಯಾಥ್ಯೂ ರೆಕ್ರಾಫ್ಟ್ ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.