ADVERTISEMENT

ನೇಪಾಳ: ಶಿಕ್ಷಣ– ಆರೋಗ್ಯ ಮೂಲಸೌಕರ್ಯಕ್ಕೆ ಭಾರತದಿಂದ ₹24 ಕೋಟಿ ಅನುದಾನ

ಪಿಟಿಐ
Published 21 ಜುಲೈ 2025, 15:47 IST
Last Updated 21 ಜುಲೈ 2025, 15:47 IST
<div class="paragraphs"><p>ಭಾರತ– ನೇಪಾಳ</p></div>

ಭಾರತ– ನೇಪಾಳ

   

ಕಠ್ಮಂಡು: ಶಿಕ್ಷಣ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಅಭಿವೃದ್ಧಿ ಯೋಜನೆ ಕೈಗೊಳ್ಳಲು ಭಾರತವು ನೇಪಾಳಕ್ಕೆ ₹24 ಕೋಟಿ ಅನುದಾನ ನೀಡಲಿದೆ. ಈ ಸಂಬಂಧ ಒಟ್ಟು 5 ಪರಿಣಾಮಕಾರಿ ಯೋಜನೆಗಳನ್ನು ಕೈಗೊಳ್ಳಲು ಭಾರತ ಮತ್ತು ನೇಪಾಳ ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. 

ಭಾರತದ ರಾಯಭಾರ ಕಚೇರಿ, ನೇಪಾಳದ ವಿವಿಧ ಸಚಿವಾಲಯಗಳು ಒಪ್ಪಂದಕ್ಕೆ ಸಹಿ ಹಾಕಿದವು. 

ADVERTISEMENT

ಮಾದೇಶ್‌ ಮತ್ತು ಸುದರ್‌ಪಶ್ಚಿಮ್‌ ಪ್ರಾಂತ್ಯಗಳಲ್ಲಿ ಶಾಲಾ ಕಟ್ಟಡಗಳು ಹಾಗೂ ಗಂಡಕಿ ಪ್ರಾಂತ್ಯದಲ್ಲಿ ಆಸ್ಪತ್ರೆ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳನ್ನು ಈ ಒಪ್ಪಂದ ಒಳಗೊಂಡಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.