ADVERTISEMENT

ಭಾರತದ ಜತೆ ಅರ್ಥಪೂರ್ಣ ಚರ್ಚೆಗೆ ಸಿದ್ಧ: ಪಾಕ್‌

ಪಿಟಿಐ
Published 23 ಜುಲೈ 2025, 22:30 IST
Last Updated 23 ಜುಲೈ 2025, 22:30 IST
ಶೆಹಬಾಜ್‌ ಶರೀಫ್‌
ಶೆಹಬಾಜ್‌ ಶರೀಫ್‌   

ಇಸ್ಲಾಮಾಬಾದ್‌: ಭಾರತದ ಜತೆಗೆ ಬಾಕಿ ಉಳಿದಿರುವ ಎಲ್ಲ ವಿಷಯಗಳ ಬಗ್ಗೆ ಅರ್ಥಪೂರ್ಣ ಚರ್ಚೆ ನಡೆಸಲು ಪಾಕಿಸ್ತಾನ ಸಿದ್ಧವಿದೆ ಎಂದು ಪಾಕಿಸ್ತಾನದ ಪ್ರಧಾನಿ ಶೆಹಬಾಜ್‌ ಶರೀಫ್‌ ಬುಧವಾರ ತಿಳಿಸಿದ್ದಾರೆ.

ತಮ್ಮ ನಿವಾಸದಲ್ಲಿ ಬ್ರಿಟನ್‌ನ ಹೈಕಮಿಷನರ್‌ ಜೇನ್‌ ಮ್ಯಾರಿಯಟ್‌ ಅವರೊಂದಿಗೆ ಮಾತುಕತೆ ನಡೆಸಿದ ವೇಳೆಯಲ್ಲಿ ಶರೀಫ್‌ ಈ ಹೇಳಿಕೆ ನೀಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. 

‘ಭಾರತ–ಪಾಕಿಸ್ತಾನ ನಡುವಿನ ಸೇನಾ ಸಂಘರ್ಷ ಶಮನಕ್ಕೆ ಬ್ರಿಟನ್‌ ನಿರ್ವಹಿಸಿದ ಪಾತ್ರದ ಕುರಿತು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಪಾಕ್‌–ಬ್ರಿಟನ್‌ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತು ದಕ್ಷಿಣ ಏಷ್ಯಾ, ಮದ್ಯ ಪ್ರಾಚ್ಯ ದೇಶಗಳ ಪ್ರಾದೇಶಿಕ ಸ್ಥಿತಿಗತಿ ಕುರಿತು ಚರ್ಚೆ ನಡೆಸಲಾಯಿತು’ ಎಂದು ಪ್ರಕಟಣೆ ಹೇಳಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.