ADVERTISEMENT

ಭಾರತದ ವಿರುದ್ಧ ಯುದ್ಧದ ಸಾಧ್ಯತೆ ಇರುವುದು ನಿಜ: ಪಾಕ್ ರಕ್ಷಣಾ ಸಚಿವ ಎಚ್ಚರಿಕೆ

ಪಿಟಿಐ
Published 8 ಅಕ್ಟೋಬರ್ 2025, 14:26 IST
Last Updated 8 ಅಕ್ಟೋಬರ್ 2025, 14:26 IST
<div class="paragraphs"><p>ಖ್ವಾಜಾ ಆಸೀಫ್</p></div>

ಖ್ವಾಜಾ ಆಸೀಫ್

   

ಇಸ್ಲಾಮಾಬಾದ್‌: ‘ಭಾರತದೊಂದಿಗೆ ಯುದ್ಧದ ಸಾಧ್ಯತೆ ಇರುವುದು ನಿಜ’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್‌ ಹೇಳಿದ್ದಾರೆ. 

ಮಂಗಳವಾರ ಸಮಾ ಟಿವಿಗೆ ನೀಡಿದ ಸಂದರ್ಶನದಲ್ಲಿ, ‘ಭವಿಷ್ಯದಲ್ಲಿ ಭಾರತದೊಂದಿಗೆ ಮತ್ತೊಮ್ಮೆ ಶಸ್ತ್ರಾಸ್ತ್ರ ಸಂಘರ್ಷ ಎದುರಾದರೆ ನಮ್ಮ ದೇಶವು ಅದರಲ್ಲಿ ದೊಡ್ಡ ಮಟ್ಟದ ಯಶಸ್ಸು ಸಾಧಿಸುತ್ತದೆ’ ಎಂದೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ADVERTISEMENT

‘ಪಾಕಿಸ್ತಾನಕ್ಕೆ 6 ತಿಂಗಳ ಹಿಂದೆ ಇರುವುದಕ್ಕಿಂತಲೂ ಈಗ ಹೆಚ್ಚಿನ ಸಂಖ್ಯೆಯ ಬೆಂಬಲಿಗರಿದ್ದಾರೆ. ಆದರೆ, ಭಾರತವು ಮೇ ಸಂಘರ್ಷದ ನಂತರ ಹಲವು ದೇಶಗಳ ಬೆಂಬಲವನ್ನು ಕಳೆದುಕೊಂಡಿದೆ’ ಎಂದು ಅವರು ಅಮೆರಿಕದ ಹೆಸರು ಉಲ್ಲೇಖಿಸದೇ ಹೇಳಿದ್ದಾರೆ.

‘ಮತ್ತೊಮ್ಮೆ ಶಸ್ತ್ರಾಸ್ತ್ರ ಸಂಘರ್ಷದ ಸಾಧ್ಯತೆ ಇರುವುದರಿಂದ ಪಾಕಿಸ್ತಾನವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದೆ. ಸಂಘರ್ಷ ಉಲ್ಭಣಗೊಳ್ಳುವುದು ನಮಗೆ ಬೇಕಿಲ್ಲ. ಆದರೆ, ಯುದ್ಧದ ಸಾಧ್ಯತೆ ಇರುವುದಂತೂ ನಿಜ. ಇದನ್ನು ನಾನು ಅಲ್ಲಗಳೆಯುವುದಿಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.

‘ಮೊಘಲ್‌ ದೊರೆ ಔರಂಗಜೇಬನ ಅಲ್ಪ ಅವಧಿ ಹೊರತುಪಡಿಸಿ, ಭಾರತವು ಎಂದಿಗೂ ಏಕೀಕೃತ ದೇಶವಾಗಿರಲಿಲ್ಲ. ಆದರೆ, ಪಾಕಿಸ್ತಾನವು ಅಲ್ಲಾಹುವಿನ ಹೆಸರಿನಲ್ಲಿ ಸೃಷ್ಟಿಯಾಗಿದೆ ಮತ್ತು ಹಲವು ಆಂತರಿಕ ಸಮಸ್ಯೆಗಳಿದ್ದರೂ ಮೇ ಸಂಘರ್ಷದ ನಂತರ ಒಗ್ಗಟ್ಟಾಗಿದೆ. ‘ನಮ್ಮ ತವರಿನಲ್ಲಿ ನಾವು ಪರಸ್ಪರ ವಾದಿಸುತ್ತೇವೆ ಮತ್ತು ಸ್ಪರ್ಧಿಸುತ್ತೇವೆ. ಆದರೆ, ಭಾರತದೊಂದಿಗೆ ಹೋರಾಟ ಮಾಡಬೇಕಾಗಿ ಬಂದಾಗ ನಾವು  ಒಂದಾಗುತ್ತೇವೆ’ ಎಂದು ಅವರು ಹೇಳಿದ್ದಾರೆ.

ಭಾರತದ ಸೇನಾ ಮುಖ್ಯಸ್ಥರಾದ ಜನರಲ್ ಉಪೇಂದ್ರ ದ್ವಿವೇದಿ ಅವರು, ‘ಮತ್ತೆ ದುಸ್ಸಾಹಸಗಳಿಗೆ ಕೈ ಹಾಕದಂತೆ’ ಪಾಕಿಸ್ತಾನಕ್ಕೆ ಇತ್ತೀಚೆಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಖ್ವಾಜಾ ಪ್ರತಿಕ್ರಿಯೆ ಹೊರಬಿದ್ದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.