ADVERTISEMENT

ಅಫ್ಗಾನಿಸ್ತಾನದಲ್ಲಿ ರಚನಾತ್ಮಕ ಪಾತ್ರ ವಹಿಸಿದ ಭಾರತ: ಜಾನ್ ಕಿರ್ಬಿ

ಪಿಟಿಐ
Published 10 ಆಗಸ್ಟ್ 2021, 5:54 IST
Last Updated 10 ಆಗಸ್ಟ್ 2021, 5:54 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ವಾಷಿಂಗ್ಟನ್‌: ಭಾರತ ಹಲವು ರೀತಿಯಲ್ಲಿ ಅಫ್ಗಾನಿಸ್ತಾನಕ್ಕೆ ನೆರವು ನೀಡಿದ್ದು, ತರಬೇತಿ ಮತ್ತು ಮೂಲಸೌಕರ್ಯ ಸುಧಾರಣೆಯ ವಿಷಯದಲ್ಲಿ ರಚನಾತ್ಮಕ ಪಾತ್ರವಹಿಸಿದೆ ಎಂದು ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಜಾನ್‌ ಕಿರ್ಬಿ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಸ್ಥಿರ ಹಾಗೂ ಉತ್ತಮ ಆಡಳಿತ ಕಾಯ್ದುಕೊಳ್ಳಲು ನೆರವಾಗುವಂತಹ ಇಂಥ ಕ್ರಮಗಳು ಹಾಗೂ ಪ್ರಯತ್ನಗಳು ಸ್ವಾಗತಾರ್ಹ‘ ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಿರ್ಬಿ, ‘ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯುದ್ದಕ್ಕೂ ಇರುವ ಸುರಕ್ಷಿತ ತಾಣಗಳ ಕುರಿತು ಅಮೆರಿಕವು ಪಾಕಿಸ್ತಾನದ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದರು.

ADVERTISEMENT

ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯುದ್ದಕ್ಕೂ ಇರುವ ಸುರಕ್ಷಿತ ತಾಣಗಳ ಕುರಿತು ಪಾಕಿಸ್ತಾನದ ನಾಯಕರೊಂದಿಗೆ ಅಮೆರಿಕ ಚರ್ಚಿಸಲಿದೆ ಎಂದು ಕಿರ್ಬಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಗಡಿಯಲ್ಲಿರುವ ಈ ತಾಣಗಳು, ಅಫ್ಗಾನಿಸ್ತಾನದೊಳಗೆ ಅಭದ್ರತೆ ಮತ್ತು ಅಸ್ಥಿರತೆಯನ್ನು ಸೃಷ್ಟಿಸುತ್ತಿರುವುದನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ. ಪಾಕಿಸ್ತಾನದ ನಾಯಕರೊಂದಿಗೆ ಈ ಕುರಿತು ಚರ್ಚಿಸುವ ಬಗ್ಗೆ ಯೋಚಿಸುವುದಿಲ್ಲ‘ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.