ADVERTISEMENT

ಹೆರಾನ್‌ ಡ್ರೋನ್‌ ಖರೀದಿ: ಇಸ್ರೇಲ್‌ ಜೊತೆ ಭಾರತ ಒಪ್ಪಂದ

ಪಿಟಿಐ
Published 2 ಡಿಸೆಂಬರ್ 2025, 15:28 IST
Last Updated 2 ಡಿಸೆಂಬರ್ 2025, 15:28 IST
   

ಟೆಲ್‌ ಅವೀವ್: ಹೆಚ್ಚುವರಿಯಾಗಿ ಇನ್ನಷ್ಟು ಹೆರಾನ್‌ ಎಂಕೆ–2 ಡ್ರೋನ್‌ಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿ ಭಾರತವು ಇಸ್ರೇಲ್‌ ಜೊತೆ ಒಪ್ಪಂದ ಮಾಡಿಕೊಂಡಿದೆ ಎಂದು ಮೂಲಗಳು ಹೇಳಿವೆ.

ಆಪರೇಷನ್ ಸಿಂಧೂರ ವೇಳೆ, ಈ ಡ್ರೋನ್‌ಗಳು ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದವು. ಈ ಕಾರಣಕ್ಕೆ ಈ ಮಾನವ ರಹಿತ ವೈಮಾನಿಕ ವಾಹನ(ಯುಎವಿ) ಹೆರಾನ್‌ ಎಂಕೆ–2 ಖರೀದಿಗೆ ಭಾರತ ನಿರ್ಧರಿಸಿದೆ ಎಂದು ಇಸ್ರೇಲ್‌ನ ರಕ್ಷಣಾ ಸಾಮಗ್ರಿ ತಯಾರಿಕೆ ಕಂಪನಿಯ ಮೂಲಗಳು ಹೇಳಿವೆ.

ಭಾರತದ ವಾಯುಪಡೆ ಹಾಗೂ ಸೇನೆ ಈಗಾಗಲೇ ಈ ಡ್ರೋನ್‌ಗಳನ್ನು ಹೊಂದಿದ್ದು, ಶೀಘ್ರವೇ ನೌಕಾಪಡೆಗೆ ಸೇರ್ಪಡೆ ಮಾಡಲಾಗುತ್ತದೆ ಎಂದು ಇವೇ ಮೂಲಗಳು ತಿಳಿಸಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.