ವಾಷಿಂಗ್ಟನ್: ‘ಕೊರೊನಾ ವೈರಸ್ ಸೋಂಕು ಪತ್ತೆ ಪರೀಕ್ಷೆಯಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ. ಅದು ಬಿಟ್ಟರೆ ಯಾವ ದೇಶವೂ ಅಮೆರಿಕದ ಸನಿಹವೂ ಬಂದಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಟ್ರಂಪ್ ಹೇಳಿರುವ ಪ್ರಕಾರ ಅಮೆರಿಕ ಈವರೆಗೆ 6.5 ಕೋಟಿ ಪರೀಕ್ಷೆಗಳನ್ನು ನಡೆಸಿದ್ದರೆ, ಭಾರತ 1.1 ಕೋಟಿ ಪರೀಕ್ಷೆಗಳನ್ನು ನಡೆಸಿದೆ.
‘ನಾವು ಸುಮಾರು 6.5 ಕೋಟಿ ಪರೀಕ್ಷೆಗಳನ್ನು ನಡೆಸಿದ್ದು, ಈ ವಿಚಾರದಲ್ಲಿ ಯಾವ ದೇಶವೂ ನಮ್ಮ ಸನಿಹ ಬಂದಿಲ್ಲ. ಭಾರತವು 1.1 ಕೋಟಿ ಪರೀಕ್ಷೆಗಳನ್ನು ನಡೆಸಿ ಎರಡನೇ ಸ್ಥಾನದಲ್ಲಿದ್ದು, ಆ ದೇಶವು 150 ಕೋಟಿ ಜನಸಂಖ್ಯೆ ಹೊಂದಿದೆ. ಸೋಂಕು ಪರೀಕ್ಷೆಯ ಹಾಗೂ ಗುಣಮಟ್ಟದ ಪರೀಕ್ಷೆಯ ವಿಚಾರದಲ್ಲಿ ನಾವು ಬಹಳ ಮುಂದಿದ್ದೇವೆ’ ಎಂದು ಟ್ರಂಪ್ ಹೇಳಿದ್ದಾರೆ.
‘ವರ್ಷಾಂತ್ಯದೊಳಗೆ ಕೊರೊನಾ ಲಸಿಕೆ ಸಿದ್ಧವಾಗುವ ಭರವಸೆಯಿದೆ. ಕೂಡಲೇ ಅದನ್ನು ಜನರಿಗೆ ದೊರೆಯುವಂತೆ ಮಾಡಲಾಗುವುದು’ ಎಂದು ಟ್ರಂಪ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.