ADVERTISEMENT

ರಷ್ಯಾದಿಂದ ತೈಲ ವ್ಯಾಪಾರ ಕಡಿದುಕೊಳ್ಳಲಿದೆ ಭಾರತ: ಪುನರುಚ್ಛರಿಸಿದ ಟ್ರಂಪ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಅಕ್ಟೋಬರ್ 2025, 2:35 IST
Last Updated 23 ಅಕ್ಟೋಬರ್ 2025, 2:35 IST
<div class="paragraphs"><p>ಡೊನಾಲ್ಡ್ ಟ್ರಂಪ್</p></div>

ಡೊನಾಲ್ಡ್ ಟ್ರಂಪ್

   

ವಾಷಿಂಗ್ಟನ್: ಭಾರತವು ರಷ್ಯಾದೊಂದಿಗಿನ ತೈಲ ವ್ಯಾಪಾರ ಸಂಬಂಧಗಳನ್ನು ಶೀಘ್ರದಲ್ಲೇ ಕಡಿದುಕೊಳ್ಳಲಿದೆ ಎಂಬ ತನ್ನ ಹೇಳಿಕೆಯನ್ನು ಪುನರುಚ್ಚರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಈ ಬಾರಿ ಒಂದು ನಿರ್ದಿಷ್ಟ ಅಂಕಿ ಅಂಶವನ್ನು ಮುಂದಿಟ್ಟಿದ್ದಾರೆ.

ವರ್ಷಾಂತ್ಯದ ವೇಳೆಗೆ ರಷ್ಯಾದಿಂದ ತೈಲ ಆಮದನ್ನು ಭಾರತ ಶೇ 40ಕ್ಕೆ ಇಳಿಸಲಿದೆ ಎಂದು ಟ್ರಂಪ್ ಹೇಳಿರುವುದಾಗಿ ಹಿಂದೂಸ್ಥಾನ್ ಟೈಮ್ಸ್ ವರದಿ ಮಾಡಿದೆ..

ADVERTISEMENT

ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮಕ್ಕೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದೇನೆ ಎಂದು ಹಲವು ಬಾರಿ ಹೇಳಿರುವ ಟ್ರಂಪ್, ಅದರಂತೆ ಈ ಬಾರಿ ರಷ್ಯಾ ಜೊತೆಗಿನ ತೈಲ ಖರೀದಿ ವ್ಯಾಪಾರವನ್ನೂ ಭಾರತ ಸ್ಥಗಿತಗೊಳಿಸಲಿದೆ ಎಂದಿದ್ದಾರೆ.

‘ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಭಾರತವು ನನಗೆ ಭರವಸೆ ನೀಡಿದೆ. ಇದು ಒಂದು ಪ್ರಕ್ರಿಯೆ. ದಿಢೀರನೆ ತೈಲ ಖರೀದಿ ನಿಲ್ಲಿಸಲು ಸಾಧ್ಯವಿಲ್ಲ’ಎಂದು ಟ್ರಂಪ್ ಶ್ವೇತಭವನದಿಂದ ತಮ್ಮ ಹೊಸ ಹೇಳಿಕೆಗಳಲ್ಲಿ ತಿಳಿಸಿದ್ದಾರೆ.

ಇದೇವೇಳೆ, ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತನಾಡಿದ್ದನ್ನು ಮೆಲುಕು ಹಾಕಿದ ಟ್ರಂಪ್, ಭಾರತ ಮತ್ತು ಚೀನಾ ನಡುವೆ ಹೋಲಿಕೆ ಮಾಡಿದರು. ಭಾರತವು ಅತ್ಯುತ್ತಮ ದೇಶವಾಗಿದ್ದು, ಚೀನಾಗಿಂತ ಭಿನ್ನವಾಗಿದೆ. ಉಭಯ ದೇಶಗಳು ರಷ್ಯಾದೊಂದಿಗೆ ವಿಭಿನ್ನ ಸಂಬಂಧವನ್ನು ಹೊಂದಿದ್ದಾರೆ. ಬೈಡನ್ ಮತ್ತು ಒಬಾಮಾ ಅವರ ಕಾರಣದಿಂದಾಗಿ, ರಷ್ಯಾ ಜೊತೆ ಸಂಬಂಧ ಕಾಯ್ದುಕೊಳ್ಳಲಾಗೊಇತ್ತು ಎಂದಿದ್ದಾರೆ.

ಭಾರತದ ಸರಕುಗಳ ಮೇಲೆ ಶೇ 25ರಷ್ಟು ಸುಂಕ ವಿಧಿಸಿದ್ದ ಟ್ರಂಪ್, ರಷ್ಯಾದಿಂದ ತೈಲ ಖರೀದಿಗೆ ಮತ್ತೆ ಶೇ 25ರಷ್ಟು ಸುಂಕ ಸೇರಿ ಒಟ್ಟು ಶೇ 50ರಷ್ಟು ಸುಂಕ ವಿಧಿಸುತ್ತಿದ್ದಾರೆ. ಇದೀಗ, ರಷ್ಯಾದಿಂದ ತೈಲ ಆಮದನ್ನು ಭಾರತ ಸ್ಥಗಿತಗೊಳಿಸಲಿದೆ ಎಂದು ಹೇಳಿರುವ ಟ್ರಂಪ್, ಸುಂಕದಲ್ಲಿ ಗಣನೀಯ ಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.