ADVERTISEMENT

ಬ್ರಿಗೇಡಿಯರ್ ಜನರಲ್‌ ಹುದ್ದೆಗೆ ಗಗನಯಾತ್ರಿ ರಾಜಾ ಜೆ.ಚಾರಿ ನಾಮನಿರ್ದೇಶನ

ಪಿಟಿಐ
Published 27 ಜನವರಿ 2023, 11:22 IST
Last Updated 27 ಜನವರಿ 2023, 11:22 IST
ರಾಜಾ ಜೆ.ಚಾರಿ
ರಾಜಾ ಜೆ.ಚಾರಿ   

ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕದ ಗಗನಯಾತ್ರಿ ರಾಜಾ ಜೆ.ಚಾರಿ ಅವರನ್ನು ಅಧ್ಯಕ್ಷ ಜೋ ಬೈಡನ್‌ ಅವರು, ವಾಯುಪಡೆಯ ಬ್ರಿಗೇಡಿಯರ್‌ ಜನರಲ್‌ ದರ್ಜೆಯ ಹುದ್ದೆಗೆ ನಾಮಕರಣ ಮಾಡಿದ್ದಾರೆ.

ಗುರುವಾರವೇ ಈ ಕುರಿತ ಪ್ರಕಟಣೆ ಹೊರಬಿದ್ದಿದೆ. ಅಮೆರಿಕದ ಸೆನೆಟ್‌ ಅನುಮೋದನೆ ದೊರೆಯಬೇಕಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.

ವಾಯುಪಡೆಯ ಕರ್ನಲ್‌, 45 ವರ್ಷದ ಚಾರಿ ಅವರನ್ನು ಬ್ರಿಗೇಡಿಯರ್‌ ಜನರಲ್ ಆಗಿ ನೇಮಿಸಲು ನಾಮನಿರ್ದೇಶನ ಮಾಡಲಾಗಿದೆ ಎಂದು ಇಲಾಖೆಯು ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಚಾರಿ ಅವರು ಪ್ರಸ್ತುತ ಟೆಕ್ಸಾಸ್‌ನ ರಾಷ್ಟ್ರೀಯ ಗಗನಯಾತ್ರಿಗಳ ಮತ್ತು ಅಂತರಿಕ್ಷ ಆಡಳಿತ ವಿಭಾಗದಲ್ಲಿ ಕ್ರ್ಯೂ–3 ಕಮಾಂಡರ್‌ ಮತ್ತು ಗಗನಯಾತ್ರಿ ಆಗಿದ್ದಾರೆ. ಇವರು ಕ್ಯಾಲಿಫೋರ್ನಿಯಾದ ಎಡ್ವರ್ಡ್‌ ವಾಯುನೆಲೆಯಲ್ಲಿ ಎಫ್‌–35 ಸಮಗ್ರ ಪರೀಕ್ಷಾ ಪಡೆಯ ನಿರ್ದೇಶಕ ಮತ್ತು 461ನೇ ಫ್ಲೈಟ್‌ ಟೆಸ್ಟ್‌ ಸ್ವಾಂಡ್ರನ್‌ ಆಗಿ ಕಾರ್ಯನಿರ್ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.