ವಾಷಿಂಗ್ಟನ್: ಅಮೆರಿಕದಲ್ಲಿ ನೆಲೆಸಿರುವ ಭಾರತದ ಸಂಜಾತ ರಾಜಾ ಕೃಷ್ಣಮೂರ್ತಿ ಅವರು ಡೆಮಾಕ್ರಟಿಕ್‌ನ ಪ್ರಾಥಮಿಕ ಚುನಾವಣೆಯಲ್ಲಿಇಲಿನಾಯ್‌ನಿಂದ ಗೆಲುವು ದಾಖಲಿಸಿದ್ದಾರೆ.
ಕೃಷ್ಣಮೂರ್ತಿಯವರು ತಮ್ಮ ಪ್ರತಿಸ್ಪರ್ಧಿ ಜುನೈದ್ ಅಹ್ಮದ್ ಅವರನ್ನು ಶೇ 71ಕ್ಕೂ ಅಧಿಕ ಮತಗಳ ಅಂತರದಿಂದ ಮಣಿಸಿದ್ದಾರೆ.
48 ವರ್ಷದ ಕೃಷ್ಣಮೂರ್ತಿ, ನವದೆಹಲಿಯಲ್ಲಿ ಜನಿಸಿದ್ದರು. ಅವರ ಪಾಲಕರು ತಮಿಳುನಾಡಿನವರು. ನವೆಂಬರ್ 8ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ರಿಪಬ್ಲಿಕ್ ಪಕ್ಷದ ಕ್ರಿಸ್ ಡಾರ್ಗಿಸ್ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.
‘ಗೆಲುವು ಖುಷಿ ನೀಡಿದೆ. ನನ್ನ ಕ್ಷೇತ್ರದ ಜನರು ಶಾಂತಿ, ಸೌಹಾರ್ದತೆಯನ್ನು ಬಯಸುತ್ತಾರೆ. ಈ ದಿಸೆಯಲ್ಲಿ ಕೆಲಸ ಮಾಡುತ್ತೇನೆ. ಸಾರ್ವತ್ರಿಕ ಚುನಾವಣೆಯತ್ತಲೂ ಗಮನ ಹರಿಸಲಿದ್ದೇನೆ’ ಎಂದು ಕೃಷ್ಣಮೂರ್ತಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.