ADVERTISEMENT

ಸಿಂಗಪುರದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸಿದ ಭಾರತೀಯ ಹೈಕಮಿಷನರ್‌

ಪಿಟಿಐ
Published 28 ಅಕ್ಟೋಬರ್ 2022, 14:12 IST
Last Updated 28 ಅಕ್ಟೋಬರ್ 2022, 14:12 IST
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಭಾರತೀಯ ಸಮುದಾಯದ ಮುಖಂಡರೊಂದಿಗೆ ಗಿಡಗಳನ್ನು ನೆಟ್ಟ ಭಾರತದ ಹೈಕಮಿಷನರ್‌ ಪಿ. ಕುಮಾರನ್‌ –ಪಿಟಿಐ ಚಿತ್ರ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಭಾರತೀಯ ಸಮುದಾಯದ ಮುಖಂಡರೊಂದಿಗೆ ಗಿಡಗಳನ್ನು ನೆಟ್ಟ ಭಾರತದ ಹೈಕಮಿಷನರ್‌ ಪಿ. ಕುಮಾರನ್‌ –ಪಿಟಿಐ ಚಿತ್ರ   

ಸಿಂಗಪುರ: ಸಿಂಗಪುರದಈಸ್ಟ್ ಕೋಸ್ಟ್ ಪಾರ್ಕ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಭಾರತದ ಹೈಕಮಿಷನರ್‌ ಪಿ. ಕುಮಾರನ್‌ ಅವರು ಗಿಡ ನೆಡುವ ಮೂಲಕ ಆಚರಿಸಿದರು. ಈ ಕಾರ್ಯಕ್ರಮದಲ್ಲಿ ಸುಮಾರು 100 ವಿದ್ಯಾರ್ಥಿಗಳು ಹಾಗೂ ಭಾರತೀಯ ಸಮುದಾಯದ ಮುಖಂಡರು ಭಾಗಿಯಾಗಿದ್ದರು.

‘ಮರಗಳು ಎಲ್ಲರಿಗೂ ಪ್ರಿಯ. ಏಕೆಂದರೆ ಇಂಗಾಲವನ್ನು ಬೇರ್ಪಡಿಸುವ ಅತ್ಯಂತ ಪರಿಣಾಮಕಾರಿ ಸಾಧನಗಳಲ್ಲಿ ಮರಗಳು ಪ್ರಮುಖವಾಗಿವೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಮಾಡಿದ ಈ ಪ್ರಯತ್ನದ ಬಗ್ಗೆ ನಮಗೆ ಸಂತೋಷವಿದೆ. ಇಂದು ನೆಟ್ಟಿರುವ ಗಿಡಗಳು ಸಿಂಗಪುರ – ಭಾರತ ನಡುವೆ ಬೆಳೆಯುತ್ತಿರುವ ಬಾಂಧವ್ಯದ ಸಂಕೇತ’ ಎಂದು ಪಿ. ಕುಮಾರನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT