ADVERTISEMENT

ದುಬೈ: ಚಿನ್ನ, ನಗದು ಹಿಂದಿರುಗಿಸಿದ ಭಾರತೀಯ ವ್ಯಕ್ತಿ: ಪೊಲೀಸರಿಂದ ಪ್ರಶಂಸೆ

ಪಿಟಿಐ
Published 13 ಸೆಪ್ಟೆಂಬರ್ 2020, 1:44 IST
Last Updated 13 ಸೆಪ್ಟೆಂಬರ್ 2020, 1:44 IST
ಚಿನ್ನ–ಪ್ರಾತಿನಿಧಿಕ ಚಿತ್ರ
ಚಿನ್ನ–ಪ್ರಾತಿನಿಧಿಕ ಚಿತ್ರ   

ದುಬೈ: ತನಗೆ ದೊರೆತಿದ್ದ ಹಣ ಮತ್ತು ಚಿನ್ನವಿದ್ದ ಬ್ಯಾಗ್‌ನ್ನು ಪೊಲೀಸರಿಗೆ ತಲುಪಿಸಿದ ಭಾರತ ಮೂಲದ ವ್ಯಕ್ತಿಗೆ ಯುಎಇ ಪೊಲೀಸರು ಗೌರವಿಸಿದ್ದಾರೆ.

ದುಬೈನಲ್ಲಿ ವಾಸಿಸುತ್ತಿರುವ ರಿತೇಶ್‌ ಜೇಮ್ಸ್‌ ಗುಪ್ತ, 14,000 ಯುಎಸ್‌ ಡಾಲರ್‌ ನಗದು (ಸುಮಾರು ₹10 ಲಕ್ಷ) ಮತ್ತು ಸುಮಾರು 54,452 ಡಾಲರ್‌ (ಸುಮಾರು ₹40 ಲಕ್ಷ) ಮೌಲ್ಯದ ಚಿನ್ನವಿದ್ದ ಬ್ಯಾಗ್‌ನ್ನು ಪೊಲೀಸರಿಗೆ ಹಿಂದಿರುಗಿಸಿದ್ದಾರೆ. ಪ್ರಾಮಾಣಿಕತೆ ಮೆಚ್ಚಿ ದುಬೈ ಪೊಲೀಸರು ಅವರಿಗೆ ಪ್ರಶಂಸಾ ಪತ್ರ ನೀಡಿರುವುದಾಗಿ ಗಲ್ಫ್ ನ್ಯೂಸ್‌ ವರದಿ ಮಾಡಿದೆ.

ಬ್ಯಾಗ್‌ ಯಾರದೆಂದು ತಕ್ಷಣಕ್ಕೆ ಪತ್ತೆಯಾಗಿಲ್ಲ. 'ಪೊಲೀಸರು ನೀಡಿರುವ ಗೌರವದಿಂದ ಘನತೆ ಮತ್ತು ಸಂತಸ ಹೆಚ್ಚಿಸಿದೆ' ಎಂದು ರಿತೇಶ್‌ ಹೇಳಿದ್ದಾರೆ.

ADVERTISEMENT

ಬ್ರಿಗೇಡಿಯರ್‌ ಯೂಸೆಫ್‌ ಅಬ್ದುಲ್ಲಾ ಸಲೀಂ ಅಲ್‌ ಅದಿದಿ ಅವರು ಪೊಲೀಸ್‌ ಠಾಣೆಯಲ್ಲಿಯೇ ರಿತೇಶ್‌ಗೆ ಪ್ರಶಂಸಾ ಪತ್ರ ನೀಡಿದ್ದು, ಸಮುದಾಯ ಮತ್ತು ಪೊಲೀಸರ ಸಹಯೋಗದ ಪ್ರಾಮುಖ್ಯತೆಯನ್ನು ನೆನಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.