ADVERTISEMENT

ಜಿಂಬಾಬ್ವೆಯಲ್ಲಿ ಖಾಸಗಿ ವಿಮಾನ ಪತನ: ಭಾರತೀಯ ಮೂಲದ ಉದ್ಯಮಿ ಸಾವು

ಪಿಟಿಐ
Published 2 ಅಕ್ಟೋಬರ್ 2023, 12:54 IST
Last Updated 2 ಅಕ್ಟೋಬರ್ 2023, 12:54 IST
ಪತನಗೊಂಡ ವಿಮಾನದ ಅವಶೇಷ –ಎಎಫ್‌ಪಿ ಚಿತ್ರ
ಪತನಗೊಂಡ ವಿಮಾನದ ಅವಶೇಷ –ಎಎಫ್‌ಪಿ ಚಿತ್ರ   

ಜೊಹಾನಸ್‌ಬರ್ಗ್‌: ನೈಋತ್ಯ ಜಿಂಬಾಬ್ವೆಯಲ್ಲಿರುವ ವಜ್ರದ ಗಣಿ ಸಮೀಪ ಖಾಸಗಿ ವಿಮಾನವೊಂದು ಪತನಗೊಂಡು  ಭಾರತೀಯ ಮೂಲದ ಕೋಟ್ಯಧಿಪತಿ ಉದ್ಯಮಿ ಹರ್ಪಾಲ್‌ ರಂಧಾವ ಮತ್ತು ಅವರ ಪುತ್ರ ಸೇರಿ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಗಣಿಗಾರಿಕೆ ಕಂಪನಿ ರಿಯೊಜಿಮ್‌ ಮಾಲೀಕತ್ವದ ಸೆಸ್ನಾ 206 ವಿಮಾನವು ಹರಾರೆಯಿಂದ ಮುರೊವಾ ವಜ್ರದ ಗಣಿಗೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿತು. ಈ ವೇಳೆ ವಿಮಾನದಲ್ಲಿ  ‘ರಿಯೊಜಿಮ್‌’ ಮಾಲೀಕ ಹರ್ಪಾಲ್‌ ರಂಧಾವ ಮತ್ತು ಅವರ ಪುತ್ರ ಹಾಗೂ ಇತರ ನಾಲ್ಕು ಮಂದಿ ಇದ್ದರು ಎಂದು ಇಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಬಳಿಕ ಅದು ಕೆಳಗೆ ಬೀಳುವ ಮುನ್ನ ಸ್ಫೋಟಗೊಂಡಿದೆ. ಮೃತರ ಪೈಕಿ ನಾಲ್ವರು ವಿದೇಶಿಯರು, ಇಬ್ಬರು ಮಾತ್ರ ಜಿಂಬಾಬ್ವೆ ಪ್ರಜೆಗಳು ಎಂದು ಪೊಲೀಸರು ತಿಳಿಸಿದ್ದಾರೆ ಎಂದು ‘ದಿ ಹೆರಾಲ್ಡ್‌’ ವರದಿ ಮಾಡಿದೆ.

ADVERTISEMENT

ಮೃತರ ಗುರುತನ್ನ ಪೊಲೀಸರು ಇನ್ನಷ್ಟೇ ಬಹಿರಂಗ ಮಾಡಬೇಕಿದೆ. ಆದರೆ ಸಿನಿಮಾ ನಿರ್ದೇಶಕ ಹೋಪ್‌ವೆಲ್‌ ಚಿನೊನಿ ಅವರು ಸ್ನೇಹಿತ ರಂಧಾವ ವಿಮಾನ ಅವಘಡದಲ್ಲಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.