
ಪ್ರಜಾವಾಣಿ ವಾರ್ತೆ
ದುಬೈ: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೃತಪಟ್ಟ ಭಾರತದ ಉಮ್ರಾ ಯಾತ್ರಿಕರ ಕುಟುಂಬಗಳ ನೆರವಿಗಾಗಿ ಜೆದ್ದಾದಲ್ಲಿರುವ ಭಾರತೀಯ ಕಾನ್ಸುಲೇಟ್, ಮದೀನಾದಲ್ಲಿ ತಾತ್ಕಾಲಿಕ ಕಚೇರಿಯನ್ನು ಸ್ಥಾಪಿಸಿದೆ ಎಂದು ಕಾನ್ಸುಲೇಟ್ ಕಚೇರಿ ಮಂಗಳವಾರ ತಿಳಿಸಿದೆ.
ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಕಾನ್ಸುಲೇಟ್, ‘ಮದೀನಾದಲ್ಲಿರುವ ಹಜ್ ಯಾತ್ರಿಗಳ ಕಚೇರಿಯಲ್ಲಿ ಈ ಸೌಲಭ್ಯ ಆರಂಭಿಸಲಾಗಿದೆ’ ಎಂದು ತಿಳಿಸಿದೆ.
ಕಾನ್ಸುಲ್ ಜನರಲ್ ಫಹಾದ್ ಅಹ್ಮದ್ ಖಾನ್ ಸೂರಿ ಅವರು, ಈ ಅಪಘಾತದಲ್ಲಿ ಬದುಳಿದಿರುವ ಏಕೈಕ ಭಾರತೀಯ ಯಾತ್ರಿ ಅಬ್ದುಲ್ ಶೋಯೆಬ್ ಮೊಹಮ್ಮದ್ ಅವರನ್ನು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿದ್ದಾರೆ ಎಂದು ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದೆ.
ಅಬ್ದುಲ್ ಶೋಯೆಬ್ ಮೊಹಮ್ಮದ್ ಅವರಿಗೆ ಮದೀನಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.