ADVERTISEMENT

ಮಾಲ್ದೀವ್ಸ್‌: ಭಾರತೀಯ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 15:45 IST
Last Updated 23 ಸೆಪ್ಟೆಂಬರ್ 2025, 15:45 IST
.
.   

ಮಾಲೆ: ಸರಕು ಸಾಗಣೆಯ ಹಡಗಿನಿಂದ ಭಾರತೀಯರೊಬ್ಬರು ಮಾಲ್ದೀವ್ಸ್‌ ಸಮೀಪದ ಸಮುದ್ರಕ್ಕೆ ಸೋಮವಾರ ಬಿದ್ದಿದ್ದು, ನಾಪತ್ತೆ ಆಗಿದ್ದಾರೆ.

ಭಾರತದ ಧ್ವಜ ಹೊಂದಿರುವ ಎಂಎಸ್‌ವಿ ದೌಲಾ ಹಡಗಿನ ಸಿಬ್ಬಂದಿಯೊಬ್ಬರು, ವಿಲಿಮಾಲೆಯಿಂದ ಉತ್ತರಕ್ಕೆ ಒಂದು ಕಿ.ಮೀ. ದೂರದಲ್ಲಿ ಸಮುದ್ರಕ್ಕೆ ಬಿದ್ದಿದ್ದಾರೆ ಎಂದು ಸನ್‌.ಎಂವಿ ನ್ಯೂಸ್‌ ಪೋರ್ಟಲ್‌ ಮಂಗಳವಾರ ವರದಿ ಮಾಡಿದೆ.

ಸೋಮವಾರ ರಾತ್ರಿ 11.35ರ ವೇಳೆಗೆ ಮಾಲ್ದೀವ್ಸ್‌ ರಕ್ಷಣಾ ಪಡೆಗೆ ಘಟನೆಯ ಮಾಹಿತಿ ದೊರೆತಿದೆ. ತಕ್ಷಣವೇ ಕರಾವಳಿ ಪಡೆಯು ಶೋಧ ಆರಂಭಿಸಿದ್ದು, ನಾಪತ್ತೆಯಾದ ವ್ಯಕ್ತಿ ಪತ್ತೆ ಆಗಿಲ್ಲ. ಶೋಧ ಮುಂದುವರಿದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.