
ಪಿಟಿಐ
ಸಿಂಗಪುರ: ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಮೇಲೆ 2019ರಲ್ಲಿ ಅತ್ಯಾಚಾರ ಎಸಗಿದ್ದ ಆರೋಪದಲ್ಲಿ ಭಾರತೀಯ ಪ್ರಜೆ ಚಿನ್ನಯ್ಯ (26) ಎಂಬಾತನಿಗೆ 16 ವರ್ಷಗಳ ಸಜೆ ಮತ್ತು 12 ಬೆತ್ತದ ಹೊಡೆತದ ಶಿಕ್ಷೆಯನ್ನು ಇಲ್ಲಿನ ನ್ಯಾಯಾಲಯ ವಿಧಿಸಿದೆ.
ಅತ್ಯಾಚಾರದ ಜತೆಗೆ ಅಪಹರಣ ಮತ್ತು ಕಳ್ಳತನದ ಆರೋಪಗಳನ್ನು ಗಣನೆಗೆ ತೆಗೆದುಕೊಂಡು ನ್ಯಾಯಾಲಯ ಈ ಆದೇಶ ನೀಡಿದೆ.
ವಿದ್ಯಾರ್ಥಿನಿಯು ತಡರಾತ್ರಿ ಬಸ್ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಕ್ಲೀನರ್ ಚಿನ್ನಯ್ಯ ಆಕೆಯನ್ನು ಹಿಂಬಾಲಿಸಿ, ಅರಣ್ಯ ಪ್ರದೇಶಕ್ಕೆ ಎಳೆದೊಯ್ದು ಅಮಾನುಷವಾಗಿ ಅತ್ಯಾಚಾರ ಎಸಗಿದ್ದ. ಈ ಘಟನೆ 2019ರ ಮೇ 4ರಂದು ನಡೆದಿತ್ತು ಎಂದು ಸ್ಥಳೀಯ ಪತ್ರಿಕೆ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.