ನ್ಯೂಯಾರ್ಕ್: ಅಮೆರಿಕದಲ್ಲಿ ಅಕ್ರಮ ಜೂಜಾಟದ ಮೂಲಕ ₹25 ಕೋಟಿಗೂ ಹೆಚ್ಚು ಹಣ ಗಳಿಕೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾದ ಆರೋಪವನ್ನು ಭಾರತೀಯ ಮೂಲದ ಅಮೆರಿಕದ ಕೌನ್ಸಿಲರ್ ಒಬ್ಬರು ಸೇರಿದಂತೆ ಅನೇಕರ ಮೇಲೆ ಹೊರಿಸಲಾಗಿದೆ.
ನ್ಯೂಜೆರ್ಸಿ ಕೌನ್ಸಿಲ್ ಸದಸ್ಯ ಮತ್ತು ಸ್ಥಳೀಯ ಉದ್ಯಮಿ ಆನಂದ್ ಶಾ (42) ಅವರು ಜೂಜಾಟ ಕೇಂದ್ರ ನಡೆಸುವ ಆರೋಪವನ್ನು ಹೊತ್ತಿದ್ದಾರೆ. ಜೊತೆಗೆ ಪ್ಲಾರಿಡಾದ ಲಾಂಗ್‌ವುಡ್‌ನಲ್ಲಿರುವ ಭಾರತೀಯ ಮೂಲದ ಸಮೀರ್ ನಾಡಕರ್ಣಿ (48) ವಿರುದ್ಧ ದೂರು ದಾಖಲಾಗಿದ್ದು, ಆತ ಜೂಜಾಟದ ಆಯೋಜಕರಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಒಂದು ವಾರದಿಂದ ಉತ್ತರ ಜೆರ್ಸಿಯಾದ 12 ಸ್ಥಳಗಳಲ್ಲಿ ಕಾನೂನು ಜಾರಿ ಅಧಿಕಾರಿಗಳು ಶೋಧ ವಾರಂಟ್‌ಗಳನ್ನು ಜಾರಿಗೊಳಿಸಿ, ಜೂಜಾಟ, ಹಣ ಅಕ್ರಮ ವರ್ಗಾವಣೆ ಸೇರಿದಂತೆ ಇತರ ಅಪರಾಧಗಳಲ್ಲಿ ತೊಡಗಿದ್ದ 39 ಜನರ ವಿರುದ್ಧ ಆರೋಪವನ್ನು ಹೊರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.