ADVERTISEMENT

ಕೋವಿಡ್ 19 | ಭಾರತೀಯ ವೈದ್ಯ, ಮಗಳ ಸಾವು

ಪಿಟಿಐ
Published 8 ಮೇ 2020, 19:30 IST
Last Updated 8 ಮೇ 2020, 19:30 IST
   

ನ್ಯೂಯಾರ್ಕ್‌: ನ್ಯೂಜೆರ್ಸಿಯಲ್ಲಿ ವೈದ್ಯರಾಗಿದ್ದ ಭಾರತೀಯ ಮೂಲದ ತಂದೆ ಮತ್ತು ಮಗಳು ಕೋವಿಡ್–19 ನಿಂದ ಮೃತಪಟ್ಟಿದ್ದಾರೆ.

ಸತ್ಯೇಂದರ್ ದೇವ್ ಖನ್ನಾ (78), ಪ್ರಿಯಾ ಖನ್ನಾ (43) ಮೃತಪಟ್ಟವರು.ದಶಕಗಳ ಕಾಲ ವಿವಿಧ ಆಸ್ಪತ್ರೆಗಳಲ್ಲಿ ಸರ್ಜನ್ ಮತ್ತು ಸರ್ಜಿಕಲ್ ವಿಭಾಗದ ಮುಖ್ಯಸ್ಥರಾಗಿ ಸತ್ಯೇಂದರ್ ದೇವ್ ಖನ್ನಾ ಸೇವೆ ಸಲ್ಲಿಸಿದ್ದರು.

ಇಂಟರ್ನಲ್‌ ಮೆಡಿಸಿನ್‌ ಮತ್ತು ನೆಫ್ರೊಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಪ್ರಿಯಾ ಖನ್ನಾ, ಯೂನಿಯನ್‌ ಹಾಸ್ಪಿಟಲ್‌ನಲ್ಲಿ ಮುಖ್ಯ ವೈದ್ಯೆಯಾಗಿದ್ದರು.

ADVERTISEMENT

‘ತಂದೆ, ಮಗಳಿಬ್ಬರೂ ಬೇರೆಯವರ ಜೀವ ಉಳಿಸಲು ತಮ್ಮ ಪ್ರಾಣವನ್ನೇ ಅರ್ಪಿಸಿದರು. ವೈದ್ಯಕೀಯ ಕ್ಷೇತ್ರಕ್ಕೆ ಮೀಸಲಾದ ಕುಟುಂಬವಿದು. ಮಾತುಗಳಿಂದ ಸಂತಾಪ ವ್ಯಕ್ತಪಡಿಸಲು ಸಾಧ್ಯವಿಲ್ಲ’ ಎಂದು ಗವರ್ನರ್‌ಫಿಲ್ ಮರ್ಫಿ ಟ್ವೀಟ್‌ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.