ADVERTISEMENT

ಬ್ರಿಟನ್‌ನಲ್ಲಿ ಮಾದಕವಸ್ತು ಕಳ್ಳಸಾಗಣೆ: ಭಾರತ ಮೂಲದ ಮೂವರು ಸೇರಿ ನಾಲ್ಕು ಮಂದಿಗೆ ಜೈಲು

​ಪ್ರಜಾವಾಣಿ ವಾರ್ತೆ
Published 10 ಮೇ 2023, 19:32 IST
Last Updated 10 ಮೇ 2023, 19:32 IST
.
.   

ಲಂಡನ್‌: ಕೆನಡಾದಿಂದ ಬ್ರಿಟನ್‌ಗೆ ಮಾದಕವಸ್ತು ಕಳ್ಳಸಾಗಣೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಂಘಟಿತ ಅಪರಾಧಗಳಲ್ಲಿ ತೊಡಗುತ್ತಿದ್ದ ಗುಂಪಿಗೆ ಸೇರಿದ, ಭಾರತ ಮೂಲದ ಮೂವರು ಸೇರಿದಂತೆ ನಾಲ್ಕು ಮಂದಿಗೆ ಬ್ರಿಟನ್‌ನ ನ್ಯಾಯಾಲಯ ಸುಮಾರು 15 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕುರಾನ್‌ ಗಿಲ್, ಜಗ್‌ ಸಿಂಗ್‌ ಮತ್ತು ಗೋವಿಂದ್‌ ಬಹಿಯಾ ಶಿಕ್ಷೆಗೊಳಗಾಗದವರು. ಇವರು ಸಂಘಟಿತ ಅಪರಾಧಗಳಲ್ಲಿ ತೊಡಗುತ್ತಿದ್ದ ಗುಂಪೊಂದರ ಸದಸ್ಯರಾಗಿದ್ದರು. ಫೆಬ್ರುವರಿಯಲ್ಲಿ ತಮ್ಮ ಸಹಚರ ಗ್ರೆಗೊರಿ ಬ್ಲಾಕ್‌ಲಾಕ್‌ನೊಡನೆ ಎರಡು ದೊಡ್ಡ ಪೆಟ್ಟಿಗೆಗಳಲ್ಲಿ ಗಾಂಜಾವನ್ನು ಕಳ್ಳಸಾಗಣೆ ಮಾಡುತ್ತಿದ್ದ ವೇಳೆ ಹೀಥ್ರೊ ವಿಮಾನ ನಿಲ್ದಾಣದಲ್ಲಿ ಬ್ರಿಟನ್‌ನ ಗಡಿ ಭದ್ರತಾ ಪಡೆಯ ಕೈಗೆ ಸಿಕ್ಕಿಬಿದ್ದಿದ್ದರು.

ಆರೋಪ ಸಾಬೀತಾದ ಬಳಿಕ, ಕಳೆದ ತಿಂಗಳು ದಕ್ಷಿಣ ಲಂಡನ್‌ನ ವೂಲ್‌ವಿಚ್‌ ಕ್ರೌನ್‌ ಕೋರ್ಟ್‌ ಇವರಿಗೆ ಜೈಲು ಶಿಕ್ಷೆ ವಿಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.