ADVERTISEMENT

ಬ್ರಿಟನ್‌: ಸುಯೆಲ್ಲಾಗೆ ಮತ್ತೆ ಒಲಿದ ಗೃಹ ಖಾತೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2022, 21:15 IST
Last Updated 25 ಅಕ್ಟೋಬರ್ 2022, 21:15 IST
   

ಲಂಡನ್‌ : ಬ್ರಿಟನ್‌ ವಲಸೆ ನೀತಿ ಸಂಬಂಧ ನಿರ್ಗಮಿತ ಪ್ರಧಾನಿ ಲಿಸ್‌ ಟ್ರಸ್‌ ಅವರ ನಿಲುವು ವಿರೋಧಿಸಿ ಗೃಹ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದ ಭಾರತೀಯ ಮೂಲದ ಸುಯೆಲ್ಲಾ ಬ್ರೇವರ್‌ಮನ್‌ ಅವರನ್ನು ನೂತನ ಪ್ರಧಾನಿ ರಿಷಿ ಸುನಕ್‌ ಅವರು ತಮ್ಮ ಸಂಪುಟದಲ್ಲಿ ಉಳಿಸಿಕೊಂಡಿದ್ದು, ಸುಯೆಲ್ಲಾ ಅವರನ್ನು ಗೃಹ ಕಾರ್ಯದರ್ಶಿಯಾಗಿ ಮುಂದುವರಿಸಿದ್ದಾರೆ.

ಸುಯೆಲ್ಲಾ ಅವರು ಸುನಕ್‌ ಅವರಂತೆಯೇ ಬ್ರೆಕ್ಸಿಟ್‌ ಅಭಿಯಾನದ ಪರವಿದ್ದರು. ಸುಯೆಲ್ಲಾ ಅವರ ರಾಜೀನಾಮೆ ಲಿಸ್‌ ಟ್ರಸ್‌ ಅವರ ಪದಚ್ಯುತಿಗೆ ವೇಗ ನೀಡಿತ್ತು.

ಸುನಕ್‌ ತಮ್ಮ ನಂಬಿಕಸ್ಥ ಜೇಮ್ಸ್‌ ಕ್ಲೆವರ್‌ಲಿ ಅವರನ್ನೂ ವಿದೇಶಾಂಗ ಕಾರ್ಯದರ್ಶಿಯಾಗಿ ಮತ್ತು ಬೆನ್‌ ವ್ಯಾಲೆಸ್‌ ಅವರನ್ನು ರಕ್ಷಣಾ ಕಾರ್ಯದರ್ಶಿಯಾಗಿ ಮುಂದುವರಿಸಿದ್ದು, ನಧೀಮ್‌ ಜವಾರಿ ಅವರನ್ನು ಟೋರಿ ಪಕ್ಷದ ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಗ್ರಾಂಟ್‌ ಶಾಪ್ಸ್‌ ಅವರಿಗೆ ವಾಣಿಜ್ಯ ಸಚಿವ ಸ್ಥಾನ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.