ADVERTISEMENT

ಆಸ್ಟ್ರೇಲಿಯಾ: ಭಾರತ ಮೂಲದ ವ್ಯಕ್ತಿಗೆ 22 ವರ್ಷ ಜೈಲು ಶಿಕ್ಷೆ

ಪಿಟಿಐ
Published 14 ಏಪ್ರಿಲ್ 2021, 8:15 IST
Last Updated 14 ಏಪ್ರಿಲ್ 2021, 8:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೆಲ್ಬರ್ನ್‌: ಆಸ್ಟ್ರೇಲಿಯಾದ ನಾಲ್ಕು ಮಂದಿ ಪೊಲೀಸರನ್ನು ಹತ್ಯೆ ಮಾಡಿದ ಪ್ರಕರಣದಡಿ ಭಾರತೀಯ ಮೂಲದ ಮೊಹಿಂದರ್‌ ಸಿಂಗ್‌ಗೆ 22 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಕಳೆದ ವರ್ಷ ಏಪ್ರಿಲ್‌ 22 ರಂದು ಮೆಲ್ಬರ್ನ್‌ನ ಈಸ್ಟರ್ನ್ ಫ್ರೀವೇನಲ್ಲಿ ಭಾರತ ಮೂಲದ ಮೊಹಿಂದರ್‌ ಸಿಂಗ್‌, ಡ್ರಗ್ಸ್‌ ನಶೆಯಲ್ಲಿ ಪೊಲೀಸರ ಮೇಲೆ ಟ್ರಕ್‌ ಚಲಾಯಿಸಿದ್ದ.

ಈ ಪ್ರಕರಣದ ವಿಚಾರಣೆ ನಡೆಸಿದ ವಿಕ್ಟೋರಿಯಾದ ಸುಪ್ರೀಂಕೋರ್ಟ್‌, ಮೊಹಿಂದರ್‌ ಸಿಂಗ್‌ಗೆ 22 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ 18 ವರ್ಷ 6 ತಿಂಗಳವರೆಗೆ ಅಪರಾಧಿಗೆ ಪರೋಲ್‌ ನೀಡದಂತೆ ನಿರ್ಬಂಧ ವಿಧಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.