ADVERTISEMENT

ಭಾರತೀಯ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿಗೆ 'ವಿಶೇಷ ನಾಯಕತ್ವ' ಪ್ರಶಸ್ತಿ

ಪಿಟಿಐ
Published 31 ಮೇ 2022, 2:25 IST
Last Updated 31 ಮೇ 2022, 2:25 IST
ಭಾರತ ಮೂಲದ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿ
ಭಾರತ ಮೂಲದ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿ   

ವಾಷಿಂಗ್ಟನ್‌: ಭಾರತ ಮೂಲದ ಅಮೆರಿಕನ್‌ ಸಂಸದ ರಾಜಾ ಕೃಷ್ಣಮೂರ್ತಿ ಅವರಿಗೆ 'ಡಿಸ್ಟಿಂಗ್ವಿಷ್ಡ್‌ ಲೀಡರ್‌ಶಿಪ್‌ ಅವಾರ್ಡ್‌' (ವಿಶೇಷ ನಾಯಕತ್ವ) ನೀಡಿ ಗೌರವಿಸಲಾಗಿದೆ.

ಅನುಪಮ ಸಾರ್ವಜನಿಕ ಸೇವೆ ಮತ್ತು ವೃತ್ತಿ ಬದುಕಿನ ಯಶಸ್ಸನ್ನು ಗುರುತಿಸಿ 48 ವರ್ಷದ ರಾಜಾ ಕೃಷ್ಣಮೂರ್ತಿ ಅವರಿಗೆ ಈ ಗೌರವ ನೀಡಲಾಗಿದೆ. ಇಲಿನಾಯಿಸ್‌ನ ಮುಖ್ಯ ಕಾರ್ಯದರ್ಶಿ ಜೆಸ್ಸಿ ವೈಟ್‌ ಅವರು ಕೃಷ್ಣಮೂರ್ತಿ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಡೆಮಕ್ರಾಟಿಕ್‌ ಪಾರ್ಟಿಯ ನಾಯಕರಾಗಿರುವ ಕೃಷ್ಣಮೂರ್ತಿ ಅವರು 2017ರಿಂದ ಇಲಿನಾಯಿಸ್‌ನ 8ನೇ ವಾರ್ಡ್‌ ಅನ್ನು ಪ್ರತಿನಿಧಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.