ADVERTISEMENT

ಇಸ್ರೇಲ್ ಪರ ನೀತಿ ವಿರೋಧಿಸಿದ ಭಾರತದ ವಿದ್ಯಾರ್ಥಿ ಅಮೆರಿಕದಲ್ಲಿ ಬಂಧನ

ಪಿಟಿಐ
Published 20 ಮಾರ್ಚ್ 2025, 5:53 IST
Last Updated 20 ಮಾರ್ಚ್ 2025, 5:53 IST
   

ನ್ಯೂಯಾರ್ಕ್‌: ಅಮೆರಿಕದಲ್ಲಿ ಫೊಸ್ಟ್‌ ಡಾಕ್ಟೋರಲ್ ಫೆಲೊ ಆಗಿರುವ ಭಾರತೀಯ ಪ್ರಜೆ ಬದರ್ ಖಾನ್ ಸುರಿ ಎನ್ನುವವರನ್ನು ವಲಸೆ ವಿಭಾಗದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬರು ಹಮಾಸ್‌ ಬೆಂಬಲಿಸುವ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಬಂದ ನಂತರ ಸ್ವಯಂ ಗಡೀಪಾರಾದ ಕೆಲವೇ ದಿನಗಳಲ್ಲಿ ಈ ವಿದ್ಯಾರ್ಥಿಯನ್ನು ವಶಕ್ಕೆ ಪಡೆಯಲಾಗಿದೆ.

ಖಾನ್ ಅವರ ಪತ್ನಿ ಪ್ಯಾಲೆಸ್ಟೀನ್‌ ಮೂಲದವರಾದ ಕಾರಣಕ್ಕಾಗಿ, ಖಾನ್ ಮತ್ತು ಅವರ ಪತ್ನಿ ಇಸ್ರೇಲ್ ಪರವಾದ ಅಮೆರಿಕದ ನೀತಿಯನ್ನು ವಿರೋಧಿಸುತ್ತಾರೆ ಎಂಬ ಅನುಮಾನದ ಆಧಾರದಲ್ಲಿ ಅವರನ್ನು ಶಿಕ್ಷಿಸಲಾಗುತ್ತಿದೆ ಎಂದು ಖಾನ್ ಪರ ವಕೀಲರು ಆರೋಪಿಸಿದ್ದಾರೆ. ಖಾನ್ ಅವರ ಪತ್ನಿ ಅಮೆರಿಕದ ಪ್ರಜೆ. ಖಾನ್ ಅವರು ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ವ್ಯಾಸಂಗ ಮಾಡಿದ್ದರು.

ADVERTISEMENT

ಅವರು ಈಗ ವಾಷಿಂಗ್ಟನ್‌ನ ಜಾರ್ಜ್‌ಟೌನ್‌ ವಿಶ್ವವಿದ್ಯಾಲಯದ ಎಡ್ಮಂಡ್ ಎ ವಾಲ್ಶ್ ಸ್ಕೂಲ್ ಆಫ್ ಫಾರಿನ್ ಸರ್ವಿಸ್‌ನ ಅಲ್ವಲೀದ್ ಬಿನ್ ತಲಾಲ್ ಮುಸ್ಲಿಂ–ಕ್ರೈಸ್ತ ಅಧ್ಯಯನ ಕೇಂದ್ರದ ಪೋಸ್ಟ್‌ ಡಾಕ್ಟೋರಲ್ ಫೆಲೊ ಆಗಿದ್ದಾರೆ.

ಮುಸುಕುಧಾರಿ ಏಜೆಂಟರು ಖಾನ್ ಅವರನ್ನು ವರ್ಜಿನಿಯಾ ನಿವಾಸದಲ್ಲಿ ಸೋಮವಾರ ರಾತ್ರಿ ಬಂಧಿಸಿದ್ದಾರೆ ಎಂದು ವರದಿಯು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.