
ನ್ಯೂಯಾರ್ಕ್: ಅಮೆರಿಕದ ‘ಟೆಕ್ಸಾಸ್ ಎ ಆ್ಯಂಡ್ ಎಂ ಯೂನಿವರ್ಸಿಟಿ ಕಾರ್ಪಸ್ ಕ್ರಿಸ್ಟಿ’ಯಿಂದ ಇತ್ತೀಚೆಗೆ ಪದವಿ ಪಡೆದು ಉದ್ಯೋಗ ಹುಡುಕುತ್ತಿದ್ದ, ಆಂಧ್ರಪ್ರದೇಶದ ರಾಜ್ಯಲಕ್ಷ್ಮಿ ಯರ್ಲಗಡ್ಡ ಅಲಿಯಾಸ್ ರಾಜಿ (23) ಅವರು ತೀವ್ರ ಕೆಮ್ಮು ಮತ್ತು ಎದೆನೋವಿನಿಂದ ನ.7ರಂದು ಮೃತಪಟ್ಟಿದ್ದಾರೆ.
‘ಆಂಧ್ರಪ್ರದೇಶದ ಬಾಪಟ್ಲಾ ಜಿಲ್ಲೆಯ ಕರ್ಮೆಚೇಡು ಗ್ರಾಮದ ರಾಜ್ಯಲಕ್ಷ್ಮಿ ತಂದೆ ಬಡ ರೈತ. ಆಕೆ ತನ್ನ ಕುಟುಂಬಕ್ಕೆ ಉಜ್ವಲ ಭವಿಷ್ಯ ಕಲ್ಪಿಸುವ ಭರವಸೆಯೊಂದಿಗೆ ಅಮೆರಿಕಕ್ಕೆ ಬಂದಿದ್ದಳು. ವೃತ್ತಿಜೀವನ ಪ್ರಾರಂಭಿಸಲು ಉದ್ಯೋಗ ಹುಡುಕುತ್ತಿದ್ದಳು’ ಎಂದು ಆಕೆಯ ಸೋದರ ಸಂಬಂಧಿ ಚೈತನ್ಯ ವೈವಿಕೆ ತಿಳಿಸಿದ್ದಾರೆ.
ಚೈತನ್ಯ ಅವರು ಟೆಕ್ಸಾಸ್‌ನ ಡೆಂಟನ್ ನಗರದಲ್ಲಿ ‘ಗೋ ಫಂಡ್ ಮಿ’ ಅಭಿಯಾನ ಆರಂಭಿಸಿದ್ದಾರೆ. ರಾಜ್ಯಲಕ್ಷ್ಮಿ ಅವರ ಅಂತ್ಯಕ್ರಿಯೆ ವೆಚ್ಚ, ಶೈಕ್ಷಣಿಕ ಸಾಲಗಳು ಮತ್ತು ಅವರ ಶವವನ್ನು ಭಾರತಕ್ಕೆ ತರಲು ಮತ್ತು ಅವರ ಕುಟುಂಬಕ್ಕೆ ಆರ್ಥಿಕ ಸಹಾಯಕ್ಕಾಗಿ 1.25 ಲಕ್ಷ ಡಾಲರ್ (₹1.10 ಕೋಟಿ) ಸಂಗ್ರಹಿಸುವುದು ಈ ಅಭಿಯಾನದ ಗುರಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.