ADVERTISEMENT

ದುಬೈ: ನಾಪತ್ತೆಯಾಗಿದ್ದ ಭಾರತ ಮೂಲದ ಬಾಲಕಿ ತನ್ನದೇ ಮನೆಯ ಟೆರೆಸ್‌ನಲ್ಲಿ ಪತ್ತೆ

ಪಿಟಿಐ
Published 27 ಫೆಬ್ರುವರಿ 2021, 9:59 IST
Last Updated 27 ಫೆಬ್ರುವರಿ 2021, 9:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದುಬೈ: ನಾಪತ್ತೆಯಾಗಿದ್ದ ಭಾರತ ಮೂಲದ 15 ವರ್ಷದ ಬಾಲಕಿ ಮನೆಯಟೆರೇಸ್‌ನಲ್ಲಿ ಪತ್ತೆಯಾಗಿದ್ದಾಳೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ದುಬೈನಲ್ಲಿ ಗುರುವಾರ ಮುಂಜಾನೆ ವಾಯುವಿಹಾರಕ್ಕೆ ತೆರಳಿದ್ದ ಹರಿಣಿ ಕರಾಣಿ ನಾಪತ್ತೆಯಾಗಿದ್ದಾಳೆ ಎಂದು ‘ಗಲ್ಫ್‌ ನ್ಯೂಸ್‌’ ವರದಿ ಮಾಡಿತ್ತು.

‘ಶಾಲೆಯಲ್ಲಿ ಕಡಿಮೆ ಅಂಕ ಗಳಿಸಿದ್ದಾಳೆ ಎಂಬ ಕಾರಣಕ್ಕೆ ಹರಿಣಿಯನ್ನು ಪೋಷಕರು ಗದರಿಸಿದ್ದರು. ಆಕೆಯ ಮೊಬೈಲ್ ಫೋನ್‌ ಅನ್ನು ವಶಕ್ಕೆ ಪಡೆದುಕೊಂಡಿದ್ದರು. ಇದರಿಂದ ಬೇಸರಗೊಂಡ ಬಾಲಕಿ, ತನ್ನದೇ ಮನೆಯ ಟೆರೇಸ್‌ನಲ್ಲಿ ಅವಿತು ಕುಳಿತಿದ್ದಳು’ ಎಂದು ವರದಿಗಳು ಹೇಳಿವೆ.

ADVERTISEMENT

ಮಗಳು ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ದೂರು ಸಲ್ಲಿಸಿದ್ದರು. ಅಲ್ಲದೆ ಮಗಳನ್ನು ಹುಡುಕುವಲ್ಲಿ ಸಹಾಯ ಮಾಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು.

‘ದುಬೈ ಪೊಲೀಸರು ಕೆಲವೇ ಗಂಟೆಗಳಲ್ಲಿ ಈ ಪ್ರಕರಣವನ್ನು ಭೇದಿಸಿ, ಹರಿಣಿಯನ್ನು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ’ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.