ADVERTISEMENT

ಸೇನಾ ಸಂಘರ್ಷ: ಥಾಯ್ಲೆಂಡ್‌ ಪ್ರವಾಸ ಸದ್ಯಕ್ಕೆ ಬೇಡ ಎಂದ ಭಾರತೀಯ ರಾಯಭಾರ ಕಚೇರಿ

ಪಿಟಿಐ
Published 25 ಜುಲೈ 2025, 6:40 IST
Last Updated 25 ಜುಲೈ 2025, 6:40 IST
<div class="paragraphs"><p>ಥಾಯ್ಲೆಂಡ್ ಮತ್ತು ಕಾಂಬೊಡಿಯಾ ಗಡಿಯಲ್ಲಿ ಸೇನಾ ಸಂಘರ್ಷ</p></div>

ಥಾಯ್ಲೆಂಡ್ ಮತ್ತು ಕಾಂಬೊಡಿಯಾ ಗಡಿಯಲ್ಲಿ ಸೇನಾ ಸಂಘರ್ಷ

   

ರಾಯಟರ್ಸ್ ಚಿತ್ರ

ಬ್ಯಾಂಕಾಕ್‌: ‘ಥಾಯ್ಲೆಂಡ್ ಮತ್ತು ಕಾಂಬೊಡಿಯಾ ಗಡಿಯಲ್ಲಿ ಉಭಯ ರಾಷ್ಟ್ರಗಳ ನಡುವೆ ಸೇನಾ ಸಂಘರ್ಷ ಏರ್ಪಟ್ಟಿದ್ದು, ಬಿಗುವಿನ ವಾತಾರವಣ ಸೃಷ್ಟಿಯಾಗಿದೆ. ಹೀಗಾಗಿ ಥಾಯ್ಲೆಂಡ್‌ನಲ್ಲಿ ನೆಲೆಸಿರುವ ಭಾರತೀಯರು ಎಚ್ಚರ ವಹಿಸಬೇಕು ಮತ್ತು ಭಾರತದಿಂದ ಬರುವವರು ಸದ್ಯಕ್ಕೆ ಪ್ರವಾಸ ಮುಂದೂಡಬೇಕು’ ಎಂದು ಥಾಯ್ಲೆಂಡ್‌ನಲ್ಲಿರುವ ರಾಯಭಾರ ಕಚೇರಿ ಪ್ರಕಟಣೆ ಹೊರಡಿಸಿದೆ.

ADVERTISEMENT

ಉಭಯ ರಾಷ್ಟ್ರಗಳ ನಡುವೆ ಕಳೆದ ಗುರುವಾರದಿಂದ ಯುದ್ಧ ಆರಂಭವಾಗಿದೆ. ಸಂಘರ್ಷದಲ್ಲಿ ಕನಿಷ್ಠ 11 ಜನ ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ ಎಂದು ಥಾಯ್‌ ಸರ್ಕಾರಿ ಸ್ವಾಮ್ಯದ ಪ್ರಚಾರ ಇಲಾಖೆ ಮಾಹಿತಿ ನೀಡಿದೆ.

ಥಾಯ್ಲೆಂಡ್ ಮತ್ತು ಕಾಂಬೊಡಿಯಾ ಗಡಿಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸದ್ಯದ ಪರಿಸ್ಥಿತಿಯ ಮಾಹಿತಿಯನ್ನು ಪ್ರವಾಸಿಗರು ಥಾಯ್ ಅಧಿಕಾರಿಗಳಿಂದ ಪಡೆಯಹುದು ಎಂದು ಅಲ್ಲಿನ ಸರ್ಕಾರ ಎಕ್ಸ್ ಖಾತೆಯಲ್ಲಿ ಹೇಳಿದೆ.

‘ಉಬಾನ್‌ ರತ್ಚಥನಿ, ಸುರಿನ್‌, ಸಿಸಾಕೆತ್‌, ಬುರಿರಾಮ್‌, ಸಾಕೋ, ಚಂತಬುರಿ ಮತ್ತು ಟ್ರಾಟ್‌ ಪ್ರಾಂತ್ಯಗಳ ಭೇಟಿಯನ್ನು ಥಾಯ್ಲೆಂಡ್‌ ಶಿಫಾರಸು ಮಾಡುವುದಿಲ್ಲ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.