ADVERTISEMENT

ರಷ್ಯಾದಲ್ಲಿ ಅಂತರರಾಷ್ಟ್ರೀಯ ಭದ್ರತಾ ಸಭೆ: ಅಜಿತ್‌ ಡೊಬಾಲ್‌ ಭಾಗಿ?

ಪಿಟಿಐ
Published 25 ಮೇ 2025, 16:18 IST
Last Updated 25 ಮೇ 2025, 16:18 IST
<div class="paragraphs"><p>ಅಜಿತ್‌ ಡೊಭಾಲ್‌</p></div>

ಅಜಿತ್‌ ಡೊಭಾಲ್‌

   

ಮಾಸ್ಕೊ: ರಷ್ಯಾದ ಭದ್ರತಾ ಮಂಡಳಿಯು ಇಲ್ಲಿ ಮೇ 27ರಿಂದ 29ರವರೆಗೆ ಆಯೋಜಿಸಿರುವ 13ನೇ ಅಂತರರಾಷ್ಟ್ರೀಯ ಭದ್ರತಾ ಸಭೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಬಾಲ್‌ ಭಾಗವಹಿಸುವ ನಿರೀಕ್ಷೆ ಇದೆ.

ರಷ್ಯಾದ ಭದ್ರತಾ ಮಂಡಳಿಯ ಕಾರ್ಯದರ್ಶಿ ಸೆರ್ಗೆಯ್ ಶೋಯಿಗು ಅವರ ಅಧ್ಯಕ್ಷತೆಯಲ್ಲಿ ಭದ್ರತಾ ವಿಷಯಗಳ ಕುರಿತು ನಡೆಯಲಿರುವ ಉನ್ನತ ಪ್ರತಿನಿಧಿಗಳ ಸಭೆಯಲ್ಲಿ ಪಾಲ್ಗೊಳ್ಳಲು ಡೊಬಾಲ್‌ ಅವರಿಗೆ ಆಹ್ವಾನ ನೀಡಲಾಗಿದೆ. ಪಾಕಿಸ್ತಾನದ ಭದ್ರತಾ ಸಲಹೆಗಾರ ಲೆಫ್ಟಿನೆಂಟ್‌ ಜನರಲ್‌ ಅಸೀಮ್‌ ಮಲ್ಲಿಕ್‌ ಕೂಡ ಪಾಲ್ಗೊಳ್ಳಲಿದ್ದಾರೆ.

ADVERTISEMENT

ಭಾರತ, ಪಾಕಿಸ್ತಾನ, ಚೀನಾ ಸೇರಿದಂತೆ ವಿಶ್ವದ ದಕ್ಷಿಣ ಮತ್ತು ಪೂರ್ವದ 150 ದೇಶಗಳು ಹಾಗೂ 20 ಅಂತರರಾಷ್ಟ್ರೀಯ ಸಂಸ್ಥೆಗಳ ನಾಯಕರಿಗೆ ಈ ಸಭೆಯಲ್ಲಿ ಭಾಗವಹಿಸಲು ಆಹ್ವಾನ ನೀಡಲಾಗಿದೆ ಎಂದು ರಷ್ಯಾದ ಭದ್ರತಾ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

‘ಆಪರೇಷನ್ ಸಿಂಧೂರ’ದ ನಂತರ ಭಾರತ ಮತ್ತು ಪಾಕಿಸ್ತಾನದ ಭದ್ರತಾ ಸಲಹೆಗಾರರು ಮುಖಾಮುಖಿ ಭೇಟಿಯಾಗುವ ನಿರೀಕ್ಷೆ ಇದ್ದು, ಉಭಯತ್ರರ ನಡುವೆ ನೇರ ಮಾತುಕತೆಗೆ ರಷ್ಯಾ ವ್ಯವಸ್ಥೆ ಕಲ್ಪಿಸಲಿದೆ ಎಂದು ‘ಕೊಮ್ಮರ್‌ಸ್ಯಾಂಟ್‌’ ಪತ್ರಿಕೆಯ ಅಂಕಣಕಾರ ಸೆರ್ಗಿ ಸ್ಟ್ರೋಕನ್‌ ಸುದ್ದಿಸಂಸ್ಥೆಗೆ ತಿಳಿಸಿರುವುದಾಗಿ ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.