ADVERTISEMENT

Photos| ಪತನಗೊಂಡ ಇಂಡೊನೇ‍ಷ್ಯಾ ವಿಮಾನ: ಜಾವಾ ಸಮುದ್ರದಲ್ಲಿ ಹುಡುಕಾಟ

ಇಂಡೊನೇಷ್ಯಾ ರಾಜಧಾನಿ ಜಕಾರ್ತದಿಂದ ಹೊರಟಿದ್ದ ಶ್ರೀವಿಜಯ ಏರ್‌ ಏರ್‌ಲೈನ್‌ ಕಂಪನಿಯ ವಿಮಾನವೊಂದು ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಸಮುದ್ರದಲ್ಲಿ ಪತನವಾಗಿದೆ. ವಿಮಾನದಲ್ಲಿ 50 ಪ್ರಯಾಣಿಕರು ಹಾಗೂ 12 ಸಿಬ್ಬಂದಿ ಇದ್ದರು.ಭಾರಿ ಮಳೆಯ ಕಾರಣ ನಿಗದಿತ ಸಮಯಕ್ಕಿಂತ 30 ನಿಮಿಷ ವಿಳಂಬವಾಗಿ ಬೋಯಿಂಗ್‌ 737–500 ವಿಮಾನವು ಟೇಕ್‌ ಆಫ್‌ ಆಗಿತ್ತು. ಪಶ್ಚಿಮ ಕಾಲಿಮಂತನ್‌ ಪ್ರಾಂತ್ಯದ ಪಾಂಟಿಯಾನಾಕ್‌ಗೆ ತೆರಳುತ್ತಿದ್ದ ಈ ವಿಮಾನವು ಕೆಲವೇ ನಿಮಿಷದಲ್ಲಿ ರೇಡಾರ್‌ನಿಂದ ನಾಪತ್ತೆಯಾಗಿತ್ತು.‘ಫ್ಲೈಟ್‌ ಎಸ್‌ಜೆ- 182ನಲ್ಲಿ 62 ಜನರಿದ್ದರು. ವಿಮಾನ ನಿಲ್ದಾಣದಿಂದ 20 ಕಿ.ಮೀ. ದೂರದಲ್ಲಿರುವ ಲಾಕಿ ದ್ವೀಪದ ಸಮೀಪ ವಿಮಾನ ಪತನವಾಗಿದೆ’ ಎಂದು ಇಂಡೊನೇಷ್ಯಾ ಸಾರಿಗೆ ಸಚಿವ ಬುದಿ ಕರ್ಯಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.ಇಂಡೊನೇಷ್ಯಾ ರಾಜಧಾನಿ ಜಕಾರ್ತದ ಬಳಿಯ ಜಾವಾ ಸಮುದ್ರದಲ್ಲಿ ಪತನಗೊಂಡಿದ್ದ ವಿಮಾನದ ಅವಶೇಷಗಳನ್ನು ಹುಡುಕುತ್ತಿರುವ ರಕ್ಷಣಾ ಸಿಬ್ಬಂದಿಗೆ ಮನುಷ್ಯರ ದೇಹದ ಭಾಗಗಳು, ಬಟ್ಟೆ ತುಂಡುಗಳು ಮತ್ತು ಲೋಹದ ತುಣುಕುಗಳು ಭಾನುವಾರ ಬೆಳಗ್ಗೆ ದೊರೆತಿವೆ.ಈ ಬಗ್ಗೆ ಅಧಿಕೃತ ಹೇಳಿಕೆ ನೀಡಿರುವ ಇಂಡೊನೇಷ್ಯಾ ರಾಷ್ಟ್ರೀಯ ರಕ್ಷಣಾ ಸಂಸ್ಥೆಯು, 'ಜಾವಾ ಸಮುದ್ರದಲ್ಲಿ ದೇಹದ ಭಾಗಗಳು, ಬಟ್ಟೆ ತುಂಡುಗಳು ಮತ್ತು ಲೋಹದ ತುಣುಕುಗಳು ದೊರೆತಿವೆ. ಈ ತುಣುಕುಗಳು ಲಂಕಾಂಗ್ ದ್ವೀಪ ಮತ್ತು ಲಕಿ ದ್ವೀಪದ ನಡುವೆ ಪತ್ತೆಯಾಗಿವೆ' ಎಂದು ಮಾಹಿತಿ ನೀಡಿದೆ.

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 7:00 IST
Last Updated 10 ಜನವರಿ 2021, 7:00 IST
ಇಂಡೋನೇಷ್ಯಾದ ಪತನಗೊಂಡ ವಿಮಾನ
ಇಂಡೋನೇಷ್ಯಾದ ಪತನಗೊಂಡ ವಿಮಾನ    
ವಿಮಾನ ನಾಪತ್ತೆಯಾದ ಸುದ್ದಿ ತಿಳಿಯುತ್ತಲೇ ಆತಂಕದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರ ಸಂಬಂಧಿಗಳು
ವಿಮಾನ ನಾಪತ್ತೆಯಾದ ಸುದ್ದಿ ತಿಳಿಯುತ್ತಲೇ ಆತಂಕದಲ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರ ಸಂಬಂಧಿಗಳು
ವಿಮಾನ ಪತನಗೊಂಡ ಸುದ್ದಿ ತಿಳಿಯುತ್ತಲೇ ಆತಂಕಕ್ಕೀಡಾದ ಪ್ರಯಾಣಿಕರ ಸಂಬಂಧಿಗಳು
ನಾಪತ್ತೆಯಾಗಿದ್ದ ವಿಮಾನ ಪತ್ತೆಗಾಗಿ ಯಂತ್ರೋಪಕರಣಗಳನ್ನು ಸಾಗಿಸುತ್ತಿರುವ ಸೇನೆಯ ಸಿಬ್ಬಂದಿ
ವಿಮಾನದ ಹುಡುಕಾಟಕ್ಕೆ ಹೊರಟ ಇಂಡೋನೇ‍ಷ್ಯಾ ನೌಕಾಪಡೆಯ ಹಡಗು
ವಿಮಾನ ಪತನಗೊಂಡ ಸುದ್ದಿ ತಿಳಿಯುತ್ತಲೇ ಆತಂಕಕ್ಕೀಡಾದ ಪ್ರಯಾಣಿಕರ ಸಂಬಂಧಿಗಳು
ಪತ್ತೆಕಾರ್ಯಕ್ಕೆ ಇಳಿದ ರಕ್ಷಣಾ ತಂಡ
ರಕ್ಷಣಾ ತಂಡದಿಂದ ಸಮುದ್ರದಲ್ಲಿ ಪತ್ತೆ ಕಾರ್ಯ
ರಕ್ಷಣಾ ತಂಡದಿಂದ ಸಮುದ್ರದಲ್ಲಿ ಪತ್ತೆ ಕಾರ್ಯ
ರಕ್ಷಣಾ ತಂಡದಿಂದ ಸಮುದ್ರದಲ್ಲಿ ಪತ್ತೆ ಕಾರ್ಯ
ರಕ್ಷಣಾ ತಂಡದಿಂದ ಸಮುದ್ರದಲ್ಲಿ ಪತ್ತೆ ಕಾರ್ಯ
ದುರಂತಕ್ಕೀಡಾದ ವಿಮಾನದ ಭಾಗಗಳು
ದುರಂತಕ್ಕೀಡಾದ ವಿಮಾನದ ಭಾಗಗಳು
ವಿಮಾನದ ಭಾಗಗಳನ್ನು ಮೇಲೆತ್ತುತ್ತಿರುವ ರಕ್ಷಣಾ ಸಿಬ್ಬಂದಿ
ವಿಮಾನದ ಪತ್ತೆ ಕಾರ್ಯದಲ್ಲಿ ತೊಡಗಿರುವ ನೌಕಾ ಪಡೆ
ವಿಮಾನದ ಪತ್ತೆ ಕಾರ್ಯದಲ್ಲಿ ತೊಡಗಿರುವ ನೌಕಾ ಪಡೆ
ವಿಮಾನದ ಪತ್ತೆ ಕಾರ್ಯದಲ್ಲಿ ತೊಡಗಿರುವ ರಕ್ಷಣಾ ತಂಡಗಳು
ವಿಮಾನದ ಪತ್ತೆ ಕಾರ್ಯದಲ್ಲಿ ತೊಡಗಿರುವ ರಕ್ಷಣಾ ತಂಡಗಳು
ವಿಮಾನದ ಅವಶೇಷಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.