ADVERTISEMENT

ವಂಶವಾಹಿ ವ್ಯತ್ಯಾಸದಿಂದಲೂ ಸೋಂಕು

ರೋಗನಿರೋಧಕ ಶಕ್ತಿ ವ್ಯವಸ್ಥೆ ದೇಹದ ಮೇಲೆ ಪರಿಣಾಮ ಬೀರುವ ಸಾಧ್ಯತೆ

ಪಿಟಿಐ
Published 19 ಏಪ್ರಿಲ್ 2020, 20:30 IST
Last Updated 19 ಏಪ್ರಿಲ್ 2020, 20:30 IST
ಕೊರೊನಾ ವೈರಸ್
ಕೊರೊನಾ ವೈರಸ್   

ವಾಷಿಂಗ್ಟನ್‌: ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯಲ್ಲಿನ ವಂಶವಾಹಿ ವ್ಯತ್ಯಾಸಗಳಿಂದಲೂ ಕೊರೊನಾ ವೈರಸ್‌ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಅಧ್ಯಯನವೊಂದು ತಿಳಿಸಿದೆ.

ವೈಯಕ್ತಿಕ ವಂಶವಾಹಿಯಲ್ಲಿ ವ್ಯತ್ಯಾಸಗಳಾದರೆ ಕೋವಿಡ್‌–19 ರೋಗಿಯ ನಿರೋಧಕ ಶಕ್ತಿಯಲ್ಲಿಯೂ ವ್ಯತ್ಯಾಸವಾಗುತ್ತದೆ. ಇದರಿಂದ, ಕಾಯಿಲೆಯಿಂದ ಅತಿ ಹೆಚ್ಚು ಅಪಾಯಕ್ಕೆ ಯಾವ ರೀತಿಯಲ್ಲಿ ಸಿಲುಕುತ್ತಾರೆ ಎನ್ನುವುದನ್ನು ಗುರುತಿಸಲು ಸಾಧ್ಯವಾಗುತ್ತದೆ ಎಂದು ವಿಶ್ಲೇಷಿಸಲಾಗಿದೆ.

ಅಮೆರಿಕದ ಒರೆಗಾನ್‌ ಆರೋಗ್ಯ ಮತ್ತು ವಿಜ್ಞಾನ ವಿಶ್ವವಿದ್ಯಾಲಯದ ಸಂಶೋಧಕರು ಈ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಇದೇ ಪ್ರಥಮ ಬಾರಿ ವಂಶವಾಹಿಯೂ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎನ್ನುವ ಬಗ್ಗೆ ವಿಶ್ಲೇಷಣೆ ನಡೆಸಲಾಗಿದೆ.

ADVERTISEMENT

ರೋಗಾಣುಗಳನ್ನು ಗುರುತಿಸುವ ಕೆಲವು ನಿರೋಧಕ ಶಕ್ತಿ ವಂಶವಾಹಿಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ವಿಭಿನ್ನವಾಗಿರುತ್ತದೆ. ವೈರಾಣುಗಳನ್ನು ತ್ವರಿತಗತಿಯಲ್ಲಿ ಗುರುತಿಸಲು ಸಾಧ್ಯವಾಗದಿದ್ದರೆ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ.

ರೋಗ ನಿರೋಧಕ ಶಕ್ತಿಯ ಬಗ್ಗೆ ಕೈಗೊಳ್ಳಲಾದ ಸಂಶೋಧನಾ ಲೇಖನ ವೈರಾಣು ಕುರಿತಾದ ನಿಯತಕಾಲಿಕೆಯಲ್ಲಿ ಪ್ರಕಟಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.