ADVERTISEMENT

ಟೈಟಾನ್‌ ದುರಂತ: ಅಂತರರಾಷ್ಟ್ರೀಯ ಸಂಸ್ಥೆಗಳಿಂದ ತನಿಖೆ

ಎಪಿ
Published 26 ಜೂನ್ 2023, 13:39 IST
Last Updated 26 ಜೂನ್ 2023, 13:39 IST
‘ಟೈಟಾನ್‌’ ಸಬ್‌ಮರ್ಸಿಬಲ್‌ ನೌಕೆ
‘ಟೈಟಾನ್‌’ ಸಬ್‌ಮರ್ಸಿಬಲ್‌ ನೌಕೆ   

ಬೋಸ್ಟನ್‌: ಟೈಟಾನಿಕ್‌ ಹಡಗಿನ ಅವಶೇಷಗಳ ವೀಕ್ಷಣೆಗೆ ತೆರಳಿದ್ದ ‘ಟೈಟಾನ್‌’ ಸಬ್‌ಮರ್ಸಿಬಲ್‌ ನೌಕೆಯ ಒಳಸ್ಫೋಟಕ್ಕೆ ಕಾರಣವೇನು ಎಂಬುದರ ಪತ್ತೆಗೆ ಅಂತರರಾಷ್ಟ್ರೀಯ ಸಂಸ್ಥೆಗಳು ತನಿಖೆ ನಡೆಸುತ್ತಿವೆ.

ಅಮೆರಿಕ ಕರಾವಳಿ ಪಡೆ, ಅಮೆರಿಕ ರಾಷ್ಟ್ರೀಯ ಸಾರಿಗೆ ಸುರಕ್ಷತೆ ಮಂಡಳಿ, ಕೆನಡಾ ಸಾರಿಗೆ ಸುರಕ್ಷತೆ ಮಂಡಳಿ, ಫ್ರಾನ್ಸ್‌ನ ನೌಕಾ ಸಾವು ನೋವುಗಳ ತನಿಖಾ ಮಂಡಳಿ ಮತ್ತು ಬ್ರಿಟನ್‌ನ ನೌಕಾ ಅಪಘಾತಗಳ ತನಿಖಾ ಸಂಸ್ಥೆ ಜಂಟಿಯಾಗಿ ಜೂನ್ 18ರಂದು ನಡೆದ ಅವಘಡದ ಬಗ್ಗೆ ತನಿಖೆ ನಡೆಸುತ್ತಿವೆ.

ಕೆನಡಾ ಅಧಿಕಾರಿಗಳ ಸಹಕಾರದೊಂದಿಗೆ ಸೇಂಟ್‌.ಜೋನ್ಸ್ ಬಂದರು ಮತ್ತು ನ್ಯೂಫೌಂಡ್‌ಲ್ಯಾಂಡ್‌ನಲ್ಲಿ ಸಾಕ್ಷ್ಯಗಳನ್ನು ಕಲೆಹಾಕಲಾಗುತ್ತಿದೆ.

ADVERTISEMENT

ಟೈಟಾನಿಕ್‌ ಹಡಗಿನ ಅವಶೇಷಗಳ ವೀಕ್ಷಣೆಗೆ ಅಟ್ಲಾಂಟಿಕ್‌ ಸಾಗರದೊಳಗೆ ಐವರನ್ನು ಕರೆದೊಯ್ದಿದ್ದ ‘ಟೈಟಾನ್‌’ ನೌಕೆಯ ಅವಶೇಷ 12,500 ಅಡಿ ಆಳದಲ್ಲಿ ಗುರುವಾರ ಪತ್ತೆಯಾಗಿತ್ತು.

ಇದನ್ನೂ ಓದಿ... ಟೈಟಾನಿಕ್ ಅವಶೇಷ ನೋಡಲು ಹೋದ ಪ್ರವಾಸಿಗರ ದಾರುಣ ಅಂತ್ಯ: ಅಮೆರಿಕ ಕೋಸ್ಟ್ ಗಾರ್ಡ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.