ADVERTISEMENT

ಕುವೈತ್‌: ಇರಾನ್ ಡ್ರೋನ್‌ ದಾಳಿಯಲ್ಲಿ ಅಮೆರಿಕದ 6 ಸೈನಿಕರು ಸಾವು

ಏಜೆನ್ಸೀಸ್
Published 4 ಮಾರ್ಚ್ 2026, 7:03 IST
Last Updated 4 ಮಾರ್ಚ್ 2026, 7:03 IST
   

ವಾಷಿಂಗ್ಟನ್: ‘ಕುವೈತ್‌ನ 'ಟ್ಯಾಕ್ಟಿಕಲ್ ಆಪರೇಷನ್ ಸೆಂಟರ್' ಮೇಲೆ ಇರಾನ್ ನಡೆಸಿದ ಡ್ರೋನ್ ದಾಳಿಯಲ್ಲಿ ನಮ್ಮ ದೇಶದ ಆರು ಸೈನಿಕರು ಮೃತಪಟ್ಟಿದ್ದಾರೆ’ ಎಂದು ಅಮೆರಿಕದ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಈ ಕೇಂದ್ರವು ಶುಐಬಾ ಬಂದರಿನ ಹೃದಯಭಾಗದಲ್ಲಿದ್ದು, ಅಮೆರಿಕದ ಮುಖ್ಯ ಸೇನಾ ನೆಲೆ 'ಕ್ಯಾಂಪ್ ಅರಿಫ್ಜಾನ್'ನಿಂದ ಹಲವು ಮೈಲಿ ದೂರದಲ್ಲಿದೆ ಎಂದು ವರದಿಯಾಗಿದೆ.

ಇಸ್ರೇಲ್ ಜೊತೆಗೂಡಿ ಅಮೆರಿಕವು ಇರಾನ್ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ ಕುವೈತ್, ಬಹ್ರೇನ್‌, ಯುಎಇ ಮತ್ತು ಸೌದಿ ಅರೇಬಿಯಾದಲ್ಲಿ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿ ಇರಾನ್‌ ಪ್ರತೀಕಾರದ ದಾಳಿ ನಡೆಸುತ್ತಿದೆ.

ADVERTISEMENT

ಸೈನಿಕರ ಸಾವಿನ ವರದಿಯ ಬೆನ್ನಲ್ಲೇ, ಅಮೆರಿಕ ಸೇನೆಯ ಸುರಕ್ಷತಾ ಮುನ್ನೆಚ್ಚರಿಕೆಗಳ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ.

ಈ ನಡುವೆ, ಸಾವು-ನೋವುಗಳ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ವೈಮಾನಿಕ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ಬಂದ ಕ್ಷಿಪಣಿಯಿಂದ ‘ಟ್ಯಾಕ್ಟಿಕಲ್ ಆಪರೇಷನ್ ಸೆಂಟರ್‌ನಲ್ಲಿದ್ದ ಆರು ಸೈನಿಕರು ಹತರಾಗಿದ್ದಾರೆ’ ಎಂದು ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸೋಮವಾರ ತಿಳಿಸಿದ್ದಾರೆ.

ಸೋಮವಾರ ತೆಗೆದ ಉಪಗ್ರಹ ಚಿತ್ರಗಳನ್ನು ಸುದ್ದಿಸಂಸ್ಥೆ ಎಪಿ ಪರಿಶೀಲಿಸಿದ್ದು, ಸಂಕೀರ್ಣದ ಮುಖ್ಯ ಕಟ್ಟಡವು ಸಂಪೂರ್ಣವಾಗಿ ಧ್ವಂಸಗೊಂಡಿರುವುದು ಮತ್ತು ಅಲ್ಲಿಂದ ಕಪ್ಪು ಹೊಗೆ ಬರುತ್ತಿರುವುದು ಕಂಡುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.