ADVERTISEMENT

ಇರಾನ್ ಜನರ ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮ ಬೆಂಬಲವಿದೆ: ಇಸ್ರೇಲ್

ಏಜೆನ್ಸೀಸ್
Published 11 ಜನವರಿ 2026, 13:33 IST
Last Updated 11 ಜನವರಿ 2026, 13:33 IST
<div class="paragraphs"><p>ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ</p></div>

ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ

   

ಜೆರುಸಲೇಮ್: ಇರಾನ್ ಜನರ ಸ್ವಾತಂತ್ರ್ಯ ಹೋರಾಟಕ್ಕೆ ನಮ್ಮ ಬೆಂಬಲವಿದೆ ಎಂದು ಇಸ್ರೇಲ್‌ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಅವರು ಭಾನುವಾರ ತಿಳಿಸಿದ್ದಾರೆ.

ಇರಾನ್‌ನಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಆರಂಭವಾದ ಪ್ರತಿಭಟನೆಯು, ದಿನದಿಂದ ದಿನಕ್ಕೆ ಕಾವೇರುತ್ತಿದೆ. 1979ರ ಇರಾನ್‌ ಕಾಂತ್ರಿಯ ನಂತರ ಸತತ ಅಧಿಕಾರದಲ್ಲಿರುವವರ ಮೇಲೆ ಪ್ರತಿಭಟನಾಕಾರರ ಕೆಂಗಣ್ಣು ಬಿದ್ದಿದೆ.

ಇಸ್ಲಾಮಿಕ್‌ ರಾಷ್ಟ್ರ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ‘ಜನರ ಸ್ವಾತಂತ್ರ್ಯ ಹೋರಾಟ’ ಎಂದು ಇಸ್ರೇಲ್‌ ಬಣ್ಣಿಸಿದೆ.

ಇರಾನಿಯನ್ನರ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಅವರು ಸ್ವಾತಂತ್ರ್ಯಕ್ಕೆ ಅರ್ಹರಿದ್ದು, ಇದರಲ್ಲಿ ಅವರಿಗೆ ಯಶಸ್ಸು ಸಿಗಲಿ ಎಂದು ಗಿಡಿಯಾನ್ ಸಾರ್, ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಇರಾನಿನ ಆಡಳಿತವು ಭಯೋತ್ಪಾದನೆಗೆ ಬೆಂಬಲವಾಗಿ ನಿಂತಿದೆ. ಅದು ಅಂತರರಾಷ್ಟ್ರೀಯ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.

ಇಸ್ಲಾಮಿಕ್‌ ರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅಲ್ಲಿನ ಆಂತರಿಕ ಸಮಸ್ಯೆಯಾಗಿದೆ. ಅದನ್ನು ನಾವು ಗಮನಿಸುತ್ತಿದ್ದೇವೆ ಎಂದು ಇಸ್ರೇಲ್‌ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಭಟನೆ, ದಂಗೆಗಳಿಗೆ ಪ್ರಚೋದನೆ ನೀಡುವ ಮೂಲಕ ಇರಾನ್‌ನ ಒಗ್ಗಟ್ಟನ್ನು ಮುರಿಯಲು ಅಮೆರಿಕ ಹಾಗೂ ಇಸ್ರೇಲ್‌ ಪ್ರಯತ್ನ ಪಡುತ್ತಿವೆ ಎಂದು ಇರಾನ್‌ ಆರೋಪಿಸಿತ್ತು. ಅಮೆರಿಕ ದಾಳಿ ನಡೆಸಿದರೆ ಪ್ರತಿದಾಳಿ ನಡೆಸುವುದಾಗಿ ಕೂಡ ಎಚ್ಚರಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.