ADVERTISEMENT

Iran-Israel War: 6 ರಾಷ್ಟ್ರಗಳಲ್ಲಿನ ಸಿಬ್ಬಂದಿ ಸ್ಥಳಾಂತರಿಸಿದ ಅಮೆರಿಕ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2026, 16:13 IST
Last Updated 3 ಮಾರ್ಚ್ 2026, 16:13 IST
   

ದುಬೈ: ಅರಬ್‌ ಸಂಯುಕ್ತ ಸಂಸ್ಥಾನದಲ್ಲಿರುವ (ಯುಎಇ) ತುರ್ತು ಕಾರ್ಯಕ್ಕೆ ನಿಯೋಜನೆಗೊಳ್ಳದ ತನ್ನ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರನ್ನು ಅಮೆರಿಕದ ವಿದೇಶಾಂಗ ಇಲಾಖೆ ಮಂಗಳವಾರ ಸ್ಥಳಾಂತರಿಸಿದೆ.

ಯುಎಇಯ ದುಬೈ ಮತ್ತು ಅಬು ಧಾಬಿ ನಗರಗಳು ಪಶ್ಚಿಮ ಏಷ್ಯಾದ ಸುರಕ್ಷಿತ ನೆಲೆ ಎಂದು ದೀರ್ಘಕಾಲದಿಂದ ಪರಿಗಣಿಸಲ್ಪಟ್ಟಿದ್ದವು. ಆದರೆ, ಇರಾನ್‌ ಈ ನಗರಗಳ ಮೇಲೂ ದಾಳಿ ನಡೆಸುವ ಮೂಲಕ ಯುದ್ಧವನ್ನು ವಿಸ್ತರಿಸಿದೆ.

ಪಶ್ಚಿಮ ಏಷ್ಯಾದ ಕೊಲ್ಲಿ ರಾಷ್ಟ್ರಗಳಲ್ಲಿ ಸಂಘರ್ಷ ಆರಂಭವಾದ ಬೆನ್ನಿಗೆ ಅಮೆರಿಕವು ತುರ್ತು ಕಾರ್ಯಕ್ಕೆ ನಿಯೋಜನೆಗೊಳ್ಳದ ತನ್ನ ಸಿಬ್ಬಂದಿ ಹಾಗೂ ಕುಟುಂಬಗಳ ಸ್ಥಳಾಂತರದ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಇದೀಗ ಯುಎಇ ಸೇರ್ಪಡೆಯಿಂದಾಗಿ ಆರು ರಾಷ್ಟ್ರಗಳಲ್ಲಿ ಕಾರ್ಯಾಚರಣೆ ನಡೆದಂತಾಗಿದೆ.

ADVERTISEMENT

ಬಹರೇನ್‌, ಇರಾಕ್‌, ಜೋರ್ಡಾನ್‌, ಕುವೈತ್, ಕತಾರ್‌ಗಳಲ್ಲಿದ್ದ ತುರ್ತು ಕಾರ್ಯಕ್ಕೆ ನಿಯೋಜನೆಗೊಳ್ಳದ ತನ್ನ ಸಿಬ್ಬಂದಿ ಹಾಗೂ ಅವರ ಕುಟುಂಬ ವರ್ಗದವರನ್ನು ಅಮೆರಿಕ ಈಗಾಗಲೇ ಸ್ಥಳಾಂತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.