
ಸಾಂದರ್ಭಿಕ ಚಿತ್ರ
ದುಬೈ: ಹೆಲಿಕಾಪ್ಟರ್ ಅಪಘಾತದಲ್ಲಿ ಏಳು ಜನರೊಂದಿಗೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವಿಗೀಡಾದ ಕಾರಣ, ಅವರ ತೆರವುಗೊಂಡಿರುವ ಸ್ಥಾನಕ್ಕಾಗಿ ಜೂನ್ 28ರಂದು ಚುನಾವಣೆ ನಡೆಯಲಿದೆ. ಈ ಅಧ್ಯಕ್ಷ ಗಾದಿಯ ಚುನಾವಣೆಯಲ್ಲಿ ಸ್ವರ್ಧಿಸಲು ಬಯಸುವ ಉಮೇದುವಾರರ ನೋಂದಣಿ ಪ್ರಕ್ರಿಯೆಯನ್ನು ಇರಾನ್ ಗುರುವಾರ ಪ್ರಾರಂಭಿಸಿದೆ.
ಐದು ದಿನಗಳ ನೋಂದಣಿ ಅವಧಿಯು ಬರುವ ಮಂಗಳವಾರ (ಜೂನ್ 4) ಮುಕ್ತಾಯಗೊಳ್ಳಲಿದೆ. ‘ಗಾರ್ಡಿಯನ್ ಕೌನ್ಸಿಲ್’ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು 10 ದಿನಗಳ ನಂತರ ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ನೋಂದಣಿ ಮಾಡಿಕೊಳ್ಳಲು 40ರಿಂದ 75 ವರ್ಷದ ಒಳಗಿನ, ಕನಿಷ್ಠ ಸ್ನಾತಕೋತ್ತರ ಪದವಿಯನ್ನು ಪಡೆದ ಅಭ್ಯರ್ಥಿ ಅರ್ಹರಾಗಿರುತ್ತಾರೆ. ಎಲ್ಲಾ ಅಭ್ಯರ್ಥಿಗಳನ್ನು ಇರಾನ್‌ನ 12 ಸದಸ್ಯರ ‘ಗಾರ್ಡಿಯನ್ ಕೌನ್ಸಿಲ್’ ಅನುಮೋದಿಸಬೇಕು. ನಂತರ ಮೌಲ್ವಿಗಳು ಮತ್ತು ನ್ಯಾಯಶಾಸ್ತ್ರಜ್ಞರ ಸಮಿತಿಯು ಅಂತಿಮವಾಗಿ ನಿರ್ಧರಿಸುವರು. ಅಯಾತೊಲ್ಲಾ ಅಲಿ ಖಮೇನಿ ಅವರು ‘ಗಾರ್ಡಿಯನ್ ಕೌನ್ಸಿಲ್’ನ ಉಸ್ತುವಾರಿ ವಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.