ADVERTISEMENT

ಇರಾನ್‌ ಪ್ರತಿಭಟನಕಾರರಿಗೆ ಮರಣದಂಡನೆ ವಿಧಿಸಿಲ್ಲ: ಸಚಿವ ಅಬ್ಬಾಸ್‌ ಅರಾಘ್ಚಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 13:11 IST
Last Updated 15 ಜನವರಿ 2026, 13:11 IST
<div class="paragraphs"><p>ಸಚಿವ ಅಬ್ಬಾಸ್‌ ಅರಾಘ್ಚಿ</p></div>

ಸಚಿವ ಅಬ್ಬಾಸ್‌ ಅರಾಘ್ಚಿ

   

ಟೆಹರಾನ್‌: ಬಂಧಿಸಿರುವ ನೂರಾರು ಪ್ರತಿಭಟನೆಕಾರರಿಗೆ ಗಲ್ಲುಶಿಕ್ಷೆ ವಿಧಿಸಲಾಗುವುದಿಲ್ಲ ಎಂದು ಇರಾನ್‌ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. 

‘ಜನವರಿ 15ರಂದು ಯಾರಿಗೂ ಗಲ್ಲು ಶಿಕ್ಷೆ ವಿಧಿಸಿಲ್ಲ, 16ರಂದೂ ವಿಧಿಸುವುದಿಲ್ಲ’ ಎಂದು ಇರಾನ್‌ನ ವಿದೇಶಾಂಗ ಸಚಿವ ಅಬ್ಬಾಸ್‌ ಅರಾಘ್ಚಿ ಅವರು ಅಮೆರಿಕದ ‘ಫಾಕ್ಸ್‌ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ADVERTISEMENT

ಅಮೆರಿಕ ಮಿತ್ರರಾಷ್ಟ್ರ ಇಸ್ರೇಲ್‌, ಇರಾನ್‌ನಲ್ಲಿ ಹಿಂಸಾಚಾರಕ್ಕೆ ಪ್ರೋತ್ಸಾಹ ನೀಡುತ್ತಿದೆ ಎಂದು ಅಬ್ಬಾಸ್‌ ಅರಾಘ್ಚಿ ಇದೇ ವೇಳೆ  ಆರೋಪ ಮಾಡಿದ್ದಾರೆ.

ಸರ್ಕಾರದ ವಿರುದ್ಧ ಪ್ರತಿಭಟಿಸಿದ ಪ್ರತಿಭಟನಕಾರರಿಗೆ ಗಲ್ಲುಶಿಕ್ಷೆ ವಿಧಿಸುವ ಅಧಿಕಾರಿಗಳ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸಲಾಗುವುದು ಎಂದು ಅಮೆರಿಕ ಹೇಳಿತ್ತು.

ಅಮೆರಿಕದ ಕೋರಿಕೆಯಂತೆ ಇರಾನ್‌ ಬೆಳವಣಿಗೆ ಕುರಿತು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನಿಗದಿತ ಸಭೆ ನಡೆಯುವ ಕೆಲವು ಗಂಟೆಗಳ ಮುನ್ನ ಇರಾನ್‌ನಿಂದ ಮರಣದಂಡನೆ ರದ್ಧತಿಯ ನಿರ್ಧಾರ ಹೊರಬಿದ್ದಿದೆ. 

ಇರಾನ್‌ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದವರ ಪೈಕಿ 3,428  ಮಂದಿಯನ್ನು ಹತ್ಯೆ ಮಾಡಲಾಗಿದೆ ಎಂದು ಮಾನವ ಹಕ್ಕು ಸಂಘಟನೆಗಳು ಕಳವಳ ವ್ಯಕ್ತಪಡಿಸಿದ್ದವು. ಪ್ರತಿಭಟನಕಾರರಿಗೆ ಅಗತ್ಯ ನೆರವು ನೀಡಲಾಗುವುದು ಎಂದು ಇತ್ತೀಚಿಗೆ ಟ್ರಂಪ್‌ ಕೂಡ ತಿಳಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.