ADVERTISEMENT

ಖಮೇನಿ ನಿಧನ ವಾರ್ತೆ ಪ್ರಕಟಿಸುವಾಗ ಭಾವುಕರಾದ ಇರಾನ್ ಟಿವಿ ನಿರೂಪಕ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಮಾರ್ಚ್ 2026, 8:02 IST
Last Updated 1 ಮಾರ್ಚ್ 2026, 8:02 IST
   

ಟೆಹರಾನ್: ಅಮೆರಿಕ ಮತ್ತು ಇಸ್ರೇಲ್‌ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆಯಾಗಿರುವ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ನಿಧನ ಸುದ್ದಿಯನ್ನು ಪ್ರಕಟಿಸುವಾಗ ಇರಾನ್‌ನ ಸರ್ಕಾರಿ ಸ್ವಾಮ್ಯದ ಟಿವಿ ವಾಹಿನಿಯ ನಿರೂಪಕರೊಬ್ಬರು ತೀವ್ರ ಭಾವುಕರಾದ ಘಟನೆ ನಡೆದಿದೆ.

ಆ ವಿಡಿಯೊ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಖಮೇನಿ ಅವರು ಹತ್ಯೆಗೀಡಾಗಿದ್ದಾರೆ ಎಂದು ಇರಾನ್ ಅಧಿಕಾರಿಗಳು ಘೋಷಿಸಿದ್ದು, ಅದೇ ಅಧಿಕೃತ ಹೇಳಿಕೆಯನ್ನು ವಾಹಿನಿ ವರದಿ ಮಾಡಿದೆ. ಈ ಸುದ್ದಿಯನ್ನು ಓದುವ ವೇಳೆ ನಿರೂಪಕರು ತಮ್ಮ ಸಂಯಮ ಕಾಯ್ದುಕೊಳ್ಳಲು ಹರಸಾಹಸ ಪಡುತ್ತಿರುವುದು ಕಂಡುಬಂದಿದೆ.

ADVERTISEMENT

ಇತರ ಕೆಲವು ವರದಿಗಾರರು ಮತ್ತು ನಿರೂಪಕರು ಸಹ ಭಾವುಕರಾಗಿರುವ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.