ADVERTISEMENT

ಐಎಇಎ ಜತೆಗೆ ಇರಾನ್‌ ಒಪ್ಪಂದ ರದ್ದು? 

​ಪ್ರಜಾವಾಣಿ ವಾರ್ತೆ
Published 2 ಜುಲೈ 2025, 15:51 IST
Last Updated 2 ಜುಲೈ 2025, 15:51 IST
<div class="paragraphs"><p>ಇರಾನ್‌ನ&nbsp;ಫೋರ್ಡೊ ಪರಮಾಣು ಘಟಕದ ಉಪಗ್ರಹ ಚಿತ್ರ</p></div>

ಇರಾನ್‌ನ ಫೋರ್ಡೊ ಪರಮಾಣು ಘಟಕದ ಉಪಗ್ರಹ ಚಿತ್ರ

   

ರಾಯಿಟರ್ಸ್ ಚಿತ್ರ

ದುಬೈ (ಎಪಿ): ಅಂತರರಾಷ್ಟ್ರೀಯ ಅಣು ಶಕ್ತಿ ಸಂಸ್ಥೆ (ಐಎಇಎ) ಜತೆಗಿನ ಇರಾನ್‌ ಸಹಕಾರವನ್ನು ಕೊನೆಗೊಳಿಸುವಂತೆ ಇರಾನ್‌ ಅಧ್ಯಕ್ಷ  ಮಸೂದ್‌ ಪೆಜೆಶ್ಕಿಯಾನ್ ಬುಧವಾರ ಆದೇಶ ಹೊರಡಿಸಿದ್ದಾರೆ. ಇರಾನ್‌ನ ಪರಮಾಣು ಘಟಕಗಳ ಮೇಲೆ ಅಮೆರಿಕ ಇತ್ತೀಚೆಗೆ ದಾಳಿ ನಡೆಸಿದ್ದ ಹಿನ್ನೆಲೆಯಲ್ಲಿ ಮಸೂದ್‌ ಈ ನಿರ್ಧಾರ ಕೈಗೊಂಡಿದ್ದಾರೆಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. 

ADVERTISEMENT

ಐಎಇಎ ಜತೆಗಿನ ಸಹಕಾರ ರದ್ದುಗೊಳಿಸುವ ಬಗ್ಗೆ ಇತ್ತೀಚೆಗಷ್ಟೇ ಇರಾನ್‌ ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಿ, ಅಂಗೀಕಾರವೂ ದೊರೆತಿತ್ತು. ರಾಷ್ಟ್ರೀಯ ಭದ್ರತಾ ಮಂಡಳಿಯು ಆ ಮಸೂದೆಯನ್ನು ಪರಿಶೀಲಿಸಿ, ನಿಯಮಗಳನ್ನು ಜಾರಿಗೊಳಿಸಬೇಕಿತ್ತು.

ಭದ್ರತಾ ಮಂಡಳಿ ಈ ಕುರಿತಂತೆ ಯಾವುದೇ ಬಹಿರಂಗ ಹೇಳಿಕೆ ನೀಡಿಲ್ಲ. ಆದರೆ, ಅಧ್ಯಕ್ಷ ಮಸೂದ್‌ ಅವರೇ ಮಂಡಳಿಯ ಮುಖ್ಯಸ್ಥರಾಗಿರುವ ಕಾರಣ ಅವರು ನೀಡಿರುವ ಮೇಲ್ಕಂಡ ಆದೇಶ ಮಹತ್ವದ್ದಾಗಿದೆ. 

ವಿಶ್ವಸಂಸ್ಥೆಯ ಪರಮಾಣು ನಿಗಾ ಘಟಕವಾಗಿರುವ ಐಎಇಎ, ಬಹುಕಾಲದಿಂದ ಇರಾನ್‌ನ ಪರಮಾಣು ಯೋಜನೆಗಳ ಮೇಲ್ವಿಚಾರಣೆ ನಡೆಸುತ್ತಿದೆ. ಸದ್ಯದ ಬೆಳವಣಿಗೆ ಕುರಿತು ಐಎಇಎ ಕೂಡ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.