ADVERTISEMENT

ಇರಾಕ್‌: ಮೂವರು ಪ್ರತಿಭಟನಕಾರರು ಬಲಿ

ಏಜೆನ್ಸೀಸ್
Published 5 ನವೆಂಬರ್ 2019, 20:00 IST
Last Updated 5 ನವೆಂಬರ್ 2019, 20:00 IST
ಇರಾಕ್‌ ರಾಜಧಾನಿ ಬಾಗ್ದಾದ್‌ನಲ್ಲಿ ನಾಗರಿಕರು ಸರ್ಕಾರದ ನೀತಿಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು – ರಾಯಿಟರ್ಸ್ ಚಿತ್ರ 
ಇರಾಕ್‌ ರಾಜಧಾನಿ ಬಾಗ್ದಾದ್‌ನಲ್ಲಿ ನಾಗರಿಕರು ಸರ್ಕಾರದ ನೀತಿಗಳನ್ನು ಖಂಡಿಸಿ ಪ್ರತಿಭಟನೆ ನಡೆಸಿದರು – ರಾಯಿಟರ್ಸ್ ಚಿತ್ರ    

ಬಾಗ್ದಾದ್‌:ಇರಾಕ್‌ನ ಪ್ರಮುಖ ಬಂದರು ಉಮ್ ಖಸ್ರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ನಾಗರಿಕರ ಮೇಲೆ ಭದ್ರತಾ ಪಡೆಗಳು ನಡೆಸಿದ ಗೋಲಿಬಾರ್‌ಗೆ ಮೂವರು ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ.‌

ಉಮ್‌ ಖಸ್ರ್‌, ತೈಲ ರಫ್ತು ಮಾಡುವ ಇರಾಕ್‌ನ ಪ್ರಮುಖ ಬಂದರಾಗಿದ್ದು, ನಾಗರಿಕರು ಸರ್ಕಾರದ ನೀತಿಗಳನ್ನು ಖಂಡಿಸಿ ಬಂದರಿಗೆ ಮುತ್ತಿಗೆ ಹಾಕಿದ್ದರು. ಮೂರು ದಿನಗಳಿಂದ ವಹಿವಾಟಿಗೆ ತೊಂದರೆ ಆಗಿತ್ತು. ಹೀಗಾಗಿ ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದ್ದವು. ಶಸ್ತ್ರಾಸ್ತ್ರಗಳಿದ್ದ ವಾಹನವನ್ನು ವಶಪಡಿಸಿಕೊಳ್ಳಲು ಪ್ರತಿಭಟನಕಾರರು ಯತ್ನಿಸಿದಾಗ ಗೋಲಿಬಾರ್ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಲ್ಲದೆ,ನಝರಿಯ ಪಟ್ಟಣದಲ್ಲಿ ನಡೆದ ಸಂಘರ್ಷದಲ್ಲಿ ಇಬ್ಬರು ನಾಗರಿಕರು ಮೃತಪಟ್ಟಿದ್ದು, 23 ಮಂದಿ ಗಾಯಗೊಂಡಿದ್ದಾರೆ ಎಂದುಇರಾಕ್‌ನ ಮಾನವ ಹಕ್ಕುಗಳ ಆಯೋಗ ತಿಳಿಸಿದೆ.

ADVERTISEMENT

ಇರಾಕ್‌ನಲ್ಲಿ ಆಡಳಿತ ವಿರೋಧಿ ಅಲೆಯಿದ್ದು, ಬಾಗ್ದಾದ್‌ ಸೇರಿದಂತೆ ದಕ್ಷಿಣ ಇರಾಕ್‌ನಲ್ಲಿ ಅಕ್ಟೋಬರ್‌ನಿಂದ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಅಮೆರಿಕ– ಇರಾಕ್‌ ಯುದ್ಧದ ನಂತರ 2003ರಿಂದ ಆಡಳಿತವನ್ನು ನಡೆಸಿದ ಎಲ್ಲ ಸರ್ಕಾರಗಳು ಭ್ರಷ್ಟಾಚಾರ ನಡೆಸಿವೆ ಎಂದು ಪ್ರತಿಭಟನಕಾರರು ಆರೋಪಿಸಿದ್ದು, ರಾಜಕೀಯ ಸುಧಾರಣೆ ಮತ್ತು ಆಡಳಿತಾತ್ಮಕ ಬದಲಾವಣೆಯನ್ನು ಬಯಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.