ಪ್ರಾತಿನಿಧಿಕ ಚಿತ್ರ
ಕೈರೊ: ಇದೇ ತಿಂಗಳ ಆರಂಭದಲ್ಲಿ ಸಂಚಾರ ಸ್ಥಗಿತಗೊಳಿಸಿದ್ದ ಇರಾಕ್ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯು ಸೋಮವಾರದಿಂದ (ಡಿಸೆಂಬರ್ 30ರಿಂದ) ಲೆಬನಾನ್‌ಗೆ ಪ್ರಯಾಣ ಪುನರಾರಂಭಿಸಲಿದೆ.
ಸಾರಿಗೆ ಸಚಿವರು ಈ ಮಾಹಿತಿ ನೀಡಿರುವುದಾಗಿ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.
ನೆರೆಯ ಸಿರಿಯಾದಲ್ಲಿನ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದ 'ಇರಾಕಿ ಏರ್‌ವೇಸ್', ಭದ್ರತಾ ಕಾರಣದಿಂದಾಗಿ ಲೆಬನಾನ್‌ಗೆ ವಿಮಾನ ಸಂಚಾರವನ್ನು ಡಿಸೆಂಬರ್ 8ರಂದು ಸ್ಥಗಿತಗೊಳಿಸಿತ್ತು.
ಬಂಡುಕೋರರು ಸಿರಿಯಾದ ರಾಜಧಾನಿ ಡಮಾಸ್ಕಸ್ ಅನ್ನು ಡಿಸೆಂಬರ್ 8ರಂದು ವಶಕ್ಕೆ ಪಡೆದಿದ್ದರು. ಅದರ ಬೆನ್ನಲ್ಲೇ, ಬಶರ್ ಅಲ್–ಅಸಾದ್ ಸರ್ಕಾರ ಪತನಗೊಂಡಿತ್ತು. ಸಿರಿಯಾ ಅಧ್ಯಕ್ಷರಾಗಿದ್ದ ಅಸಾದ್, ರಷ್ಯಾಗೆ ಪಲಾಯನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.