ADVERTISEMENT

ಇರಾಕ್‌: ಮತ್ತೊಮ್ಮೆ ಸಂಸತ್‌ಗೆ ನುಗ್ಗಿದ ಸಾದರ್ ಬೆಂಬಲಿಗರು

ಏಜೆನ್ಸೀಸ್
Published 30 ಜುಲೈ 2022, 13:44 IST
Last Updated 30 ಜುಲೈ 2022, 13:44 IST
ಪ್ರತಿಭಟನಕಾರರನ್ನು ತಡೆಯಲು ಸಂಸತ್ತಿನ ಮುಖ್ಯದ್ವಾರದ ಎದುರು ಸಿಮೆಂಟ್‌ ತಡೆಗೋಡೆಗಳನ್ನು ಅಳವಡಿಸಿದ್ದ  ಭದ್ರತಾ ಸಿಬ್ಬಂದಿ–ಎಎಫ್‌ಪಿ ಚಿತ್ರ 
ಪ್ರತಿಭಟನಕಾರರನ್ನು ತಡೆಯಲು ಸಂಸತ್ತಿನ ಮುಖ್ಯದ್ವಾರದ ಎದುರು ಸಿಮೆಂಟ್‌ ತಡೆಗೋಡೆಗಳನ್ನು ಅಳವಡಿಸಿದ್ದ  ಭದ್ರತಾ ಸಿಬ್ಬಂದಿ–ಎಎಫ್‌ಪಿ ಚಿತ್ರ    

ಬಾಗ್ದಾದ್‌ (ಎಪಿ): ಶಿಯಾ ಧರ್ಮಗುರು ಮೊಕ್ತಾ‌ದ ಸಾದರ್‌ ಅವರ ಸಾವಿರಾರು ಬೆಂಬಲಿಗರು ಮತ್ತೊಮ್ಮೆ ಸಂಸತ್ತಿಗೆ ನುಗ್ಗಿ ಇರಾಕ್‌ ಧ್ವಜಗಳನ್ನು ಹಾರಿಸಿದ್ದಾರೆ.

‍ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಶನಿವಾರ ಆಶ್ರುವಾಯು, ಭಾರಿ ಶಬ್ದ ಮತ್ತು ಬೆಳಕು ಬರುವ ಬಾಂಬ್‌ಗಳನ್ನು (ಸೌಂಡ್‌ ಬಾಂಬ್‌) ಸಿಡಿಸಿದ್ದರಿಂದ ಸುಮಾರು 60 ಮಂದಿ ಗಾಯಗೊಂಡಿದ್ದಾರೆ.

ಎದುರಾಳಿ ಬಣದವರು ಪ್ರಧಾನಿ ಹುದ್ದೆಗೆಮೊಹಮ್ಮದ್‌ ಅಲ್‌ ಸುದಾನಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವುದರಿಂದ ಕೆರಳಿರುವ ಸಾದರ್‌ ಬೆಂಬಲಿಗರು ಮುಖ್ಯದ್ವಾರದ ಬಳಿ ಅಳವಡಿಸಲಾಗಿದ್ದ ಸಿಮೆಂಟ್‌ ತಡೆಗೋಡೆಗಳನ್ನುರೋಪ್‌ಗಳ ಮೂಲಕ ದಾಟಿ ಸಂಸತ್‌ನೊಳಗೆ ಪ್ರವೇಶಿಸಿದ್ದಾರೆ.

ADVERTISEMENT

‘ಭ್ರಷ್ಟಚಾರ ತೊಡೆದುಹಾಕಿ, ಭ್ರಷ್ಟ ರಾಜಕಾರಣಿಗಳು ಸಂಸತ್ತಿನ ಕಲಾಪದಲ್ಲಿ ಭಾಗವಹಿಸದಂತೆ ತಡೆಯಿರಿ ಎಂದು ಸಾದರ್‌ ಕರೆ ನೀಡಿದ್ದಾರೆ. ಅವರ ಕರೆಗೆ ಓಗೊಟ್ಟು ನಾವು ಪ್ರತಿಭಟನೆ ನಡೆಸಲು ಬಂದಿದ್ದೇವೆ’ ಎಂದು 41 ವರ್ಷದ ರಾಡ್‌ ಥಾಬೆಟ್‌ ಎಂಬುವರು ಹೇಳಿದ್ದಾರೆ.

ಪ್ರತಿಭಟನೆ ಕಾರಣ ಶನಿವಾರ ನಿಗದಿಯಾಗಿದ್ದ ಸಂಸತ್‌ ಕಲಾಪ ರದ್ದು ಮಾಡಲಾಗಿದೆ.ಬುಧವಾರ ಮೊದಲ ಸಲ ಸಂಸತ್ತಿನೊಳಗೆ ನುಗ್ಗಿದ್ದ ಸಾದರ್‌ ಬೆಂಬಲಿಗರು ಹಾಡಿ– ಕುಣಿದಾಡಿದ್ದರು.

ಅಕ್ಟೋಬರ್‌ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸಾದರ್‌ ಬಣವು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ ಬಹುಮತಕ್ಕೆ ಅಗತ್ಯವಿರುವಷ್ಟು ಸ್ಥಾನ ಗೆಲ್ಲಲು ಆಗಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.