ಕೇಪ್‌ಟೌನ್: ‘ಮೊಜಾಂಬಿಕ್‌ನ ಉತ್ತರ ಕಾಬೊ–ಡೆಲ್ಗಾಡೊ ಪ್ರಾಂತ್ಯದಲ್ಲಿ ಇಸ್ಲಾಮಿಕ್ ಸ್ಟೇಟ್ ಬಂಡುಕೋರರು ನಡೆಸಿದ ದಾಳಿಯಿಂದ ಕಳೆದ 8 ದಿನಗಳಲ್ಲಿ 46 ಸಾವಿರ ಮಂದಿ ನೆಲೆ ಕಳೆದುಕೊಂಡಿದ್ದಾರೆ’ ಎಂದು ವಿಶ್ವಸಂಸ್ಥೆಯ ವಲಸೆ ಸಂಸ್ಥೆಯು ತಿಳಿಸಿದೆ.
‘ಪ್ರಾಂತ್ಯದಲ್ಲಿದ್ದ ಶೇಕಡ 60ರಷ್ಟು ಮಂದಿಯನ್ನು ಬಲವಂತವಾಗಿ ಹೊರಹಾಕಲಾಗಿದ್ದು, ಯಾವುದೇ ಸಾವಿನ ಕುರಿತು ವರದಿಯಾಗಿಲ್ಲ’ ಎಂದು ತಿಳಿಸಿದೆ.
‘ಜುಲೈ 20ರಿಂದ 28ರವರೆಗೆ ಪ್ರಾಂತ್ಯದ ಮೂರು ಜಿಲ್ಲೆಗಳಲ್ಲಿ ನಿರಂತರ ದಾಳಿಗಳನ್ನು ನಡೆಸಲಾಗಿತ್ತು. ಇದರಿಂದಲೇ, ಇಲ್ಲಿನ ನಿವಾಸಿಗಳು ದೊಡ್ಡ ಸಂಖ್ಯೆಯಲ್ಲಿ ವಲಸೆ ಹೋಗಿದ್ದಾರೆ’ ಎಂದು ವಿಶ್ವಸಂಸ್ಥೆಯ ಮಾನವೀಯ ನೆರವು ಕಚೇರಿ ತಿಳಿಸಿದೆ.
ಎಂಟು ವರ್ಷಗಳಿಂದ ಮೊಜಾಂಬಿಕ್‌ನ ಉತ್ತರ ಭಾಗದಲ್ಲಿ ಇಸ್ಲಾಮಿಕ್ ಸ್ಟೇಟ್ ಬಂಡುಕೋರರು ದಾಳಿ ನಡೆಸುತ್ತಿದ್ದಾರೆ. ಇವರ ವಿರುದ್ಧ ಹೋರಾಡಲು ಮೊಜಾಂಬಿಕ್‌ಗೆ ನೆರವಾಗುವ ನಿಟ್ಟಿನಲ್ಲಿ ರವಾಂಡ ದೇಶದ ಸೈನಿಕರನ್ನು ನಿಯೋಜಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.