ADVERTISEMENT

ಗಾಜಾದ ಮೇಲೆ ಸೇನಾ ನಿಯಂತ್ರಣ: ಇಸ್ರೇಲ್ ಸಂಪುಟ ಅನುಮೋದನೆ

ಪಿಟಿಐ
Published 8 ಆಗಸ್ಟ್ 2025, 5:48 IST
Last Updated 8 ಆಗಸ್ಟ್ 2025, 5:48 IST
<div class="paragraphs"><p>ಹಮಾಸ್ ಸೆರೆಯಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸುವಂತೆ ಒತ್ತಾಯಿಸಿ&nbsp; ಪ್ರಧಾನಿ&nbsp;ಬೆಂಜಮಿನ್ ನೆತನ್ಯಾಹು ಅವರ ಪ್ರತಿಕೃತಿ ಹಿಡಿದು&nbsp;ನಾಗರಿಕರು ಪ್ರತಿಭಟನೆ ನಡೆಸಿದರು</p></div>

ಹಮಾಸ್ ಸೆರೆಯಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿಸುವಂತೆ ಒತ್ತಾಯಿಸಿ  ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರತಿಕೃತಿ ಹಿಡಿದು ನಾಗರಿಕರು ಪ್ರತಿಭಟನೆ ನಡೆಸಿದರು

   

ರಾಯಿಟರ್ಸ್‌ ಚಿತ್ರ

ಜೇರುಸಲೇಂ: ಗಾಜಾ ನಗರವನ್ನು ಸಂಪೂರ್ಣವಾಗಿ ಸೇನೆಯ ನಿಯಂತ್ರಣಕ್ಕೊಳಪಡಿಸುವ ಪ್ರಸ್ತಾವಕ್ಕೆ ಇಸ್ರೇಲ್‌ನ ಭದ್ರತಾ ಸಂಪುಟ ಅನುಮೋದನೆ ನೀಡಿದೆ.

ADVERTISEMENT

ಭದ್ರತಾ ಸಂಪುಟವು ಅನುಮತಿ ನೀಡಿದ ಪ್ರಸ್ತಾವವು ಐದು ಅಂಶಗಳನ್ನು ಒಳಗೊಂಡಿದೆ. ಹಮಾಸ್‌ ಅನ್ನು ನಿಶ್ಯಸ್ತ್ರೀಕರಣಗೊಳಿಸುವುದು, ಗಾಜಾವನ್ನು ಬಂಡುಕೋರರಿಂದ ಮುಕ್ತಗೊಳಿಸುವುದು, ಒತ್ತೆಯಾಳುಗಳ ಬಿಡುಗಡೆ, ಗಾಜಾವನ್ನು ಇಸ್ರೇಲ್ ಸೇನೆಯ ನಿಯಂತ್ರಣಕ್ಕೊಳಪಡಿಸುವುದು ಮತ್ತು ಹಮಾಸ್‌ ಅಥವಾ ಪ್ಯಾಲೆಸ್ಟೀನ್‌ ಹಸ್ತಕ್ಷೇಪ ಹೊಂದಿರದ ನಾಗರಿಕ ಆಡಳಿತ ವ್ಯವಸ್ಥೆಯನ್ನು ರೂಪಿಸುವ ಅಂಶಗಳು ಪ್ರಸ್ತಾವದಲ್ಲಿವೆ.

ತಕ್ಷಣ ಯುದ್ಧವನ್ನು ನಿಲ್ಲಿಸುವಂತೆ ಮತ್ತು ಒತ್ತೆಯಾಳುಗಳನ್ನು ಮರಳಿ ಕರೆತರುವಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಇಸ್ರೇಲ್‌ನಾದ್ಯಂತ ನಡೆಯುತ್ತಿರುವ ಪ್ರತಿಭಟನೆಯ ನಡುವೆಯೇ ಇಸ್ರೇಲ್‌ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

‘ಗಾಜಾವನ್ನು ನಿಯಂತ್ರಣಕ್ಕೆ ಪಡೆಯಲು ಇಸ್ರೇಲ್‌ನ ಭದ್ರತಾ ಪಡೆಗಳು (ಐಡಿಎಫ್) ಸಿದ್ಧತೆ ನಡೆಸುತ್ತಿವೆ. ಯುದ್ಧ ವಲಯದ ಹೊರಗಿನ ನಾಗರಿಕರಿಗೆ ಮಾನವೀಯ ನೆರವನ್ನು ನೀಡಲಾಗುತ್ತಿದೆ’ ಎಂದು ಇಸ್ರೇಲ್ ಪ್ರಧಾನಿ ಬೆಂಜ‌ಮಿನ್ ನೆತನ್ಯಾಹು ಅವರ ಕಚೇರಿ ತಿಳಿಸಿದೆ.

‘ಗಾಜಾವನ್ನು ಆಕ್ರಮಿಸುವುದು ಅಥವಾ ವಶಪಡಿಸಿಕೊಳ್ಳುವುದು ನಮ್ಮ ಉದ್ದೇಶವಲ್ಲ. ಹಮಾಸ್‌ ಅನ್ನು ನಾಶಪಡಿಸಿ ನಮ್ಮ ಒತ್ತೆಯಾಳುಗಳನ್ನು ಕರೆತರುವುದು ಮತ್ತು ತಾತ್ಕಾಲಿಕ ಸರ್ಕಾರಕ್ಕೆ ಗಾಜಾವನ್ನು ಹಸ್ತಾಂತರಿಸುವುದು ನಮ್ಮ ಗುರಿ’ ಎಂದು ನೆತನ್ಯಾಹು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.