ADVERTISEMENT

ದೋಹಾದಲ್ಲಿದ್ದ ಹಮಾಸ್‌ ಮುಖಂಡರ ಮೇಲೆ ಇಸ್ರೇಲ್ ದಾಳಿ

ರಾಯಿಟರ್ಸ್
Published 9 ಸೆಪ್ಟೆಂಬರ್ 2025, 22:36 IST
Last Updated 9 ಸೆಪ್ಟೆಂಬರ್ 2025, 22:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ದೋಹಾ: ಕತಾರ್‌ ರಾಜಧಾನಿ ದೋಹಾದಲ್ಲಿ ನೆಲಸಿರುವ ಹಮಾಸ್‌ ಸಂಘಟನೆಯ ನಾಯಕರನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಸೇನೆ ಮಂಗಳವಾರ ಹೇಳಿದೆ.

ಕತಾರ್‌ ಸೇರಿದಂತೆ ಹಲವು ದೇಶಗಳು ಇಸ್ರೇಲ್‌ ದಾಳಿಯನ್ನು ಖಂಡಿಸಿವೆ. ಹಮಾಸ್‌ನ ರಾಜಕೀಯ ನಾಯಕರ ನಿವಾಸಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದು ಕತಾರ್‌ ಹೇಳಿದೆ. ದಾಳಿಯ ಗುರಿ ಈಡೇರಿದೆಯೇ ಎಂಬ ಬಗ್ಗೆ ಇಸ್ರೇಲ್‌ ಯಾವುದೇ ಹೇಳಿಕೆ ನೀಡಿಲ್ಲ. 

ADVERTISEMENT

ಐವರು ಸದಸ್ಯರ ಸಾವು: ದೋಹಾದಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ತನ್ನ ಐದು ಸದಸ್ಯರು ಮೃತಪಟ್ಟಿದ್ದಾರೆ ಎಂದು ಹಮಾಸ್ ಹೇಳಿದೆ. ಇದರಲ್ಲಿ ಹಮಾಸ್‌ ನಾಯಕ ಖಲೀಲ್ ಅಲ್-ಹಯ್ಯಾ ಅವರ ಮಗನೂ ಸೇರಿದ್ದಾರೆ. 

ಆದರೆ ಕದಾನ ವಿರಾಮ ಮಾತುಕತೆ ನಡೆಸಲು ತಾನು ನಿಯೋಜಿಸಿರುವ ತಂಡದ ಸದಸ್ಯರನ್ನು ಹತ್ಯೆ ಮಾಡುವ ಇಸ್ರೇಲ್‌ ಪ್ರಯತ್ನ ವಿಫಲವಾಗಿದೆ ಎಂದಿದೆ.

ಕತಾರ್‌ನಲ್ಲಿ ಆಶ್ರಯ ಪಡೆದಿರುವ ಹಮಾಸ್‌ ಸಂಘಟನೆಯ ಉನ್ನತ ನಾಯಕರಲ್ಲಿ ಪ್ರಮುಖ ಸಂಧಾನಕಾರ ಖಲೀಲ್ ಅಲ್-ಹಯ್ಯಾ ಮತ್ತು ರಾಜಕೀಯ ಬ್ಯೂರೊ ಮುಖ್ಯಸ್ಥ ಖಾಲಿದ್ ಮೆಶಾಲ್ ಸೇರಿದ್ದಾರೆ.

ಕತಾರ್‌ನಲ್ಲಿ ಕಾರ್ಯಾಚರಣೆ ನಡೆಸುವ ಬಗ್ಗೆ ಇಸ್ರೇಲ್‌ ತನಗೆ ಮುಂಚಿತವಾಗಿ ಮಾಹಿತಿ ನೀಡಿತ್ತು ಎಂದು ಅಮೆರಿಕ ಹೇಳಿದೆ.

ಜೆರುಸಲೇಂನಲ್ಲಿ ಸೋಮವಾರ ನಡೆದ ಗುಂಡಿನ ದಾಳಿಗೆ ಪ್ರತೀಕಾರವಾಗಿ ಈ ಕಾರ್ಯಾಚರಣೆ ನಡೆಸಲು ಸೇನೆಗೆ ಆದೇಶಿಸಿದ್ದೆ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ತಿಳಿಸಿದ್ದಾರೆ. ಜೆರುಸಲೇಂನಲ್ಲಿ ಬಂದೂಕುಧಾರಿಯೊಬ್ಬ ಆರು ಮಂದಿಯನ್ನು ಹತ್ಯೆಗೈದಿದ್ದ. ದಾಳಿಯ ಹೊಣೆಯನ್ನು ಹಮಾಸ್‌ ಹೊತ್ತುಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.