ADVERTISEMENT

ಇಸ್ರೇಲ್‌: ಬಲಪಂಥೀಯ ಬೆನೆಟ್‌ ಸಂಭಾವ್ಯ ಪ್ರಧಾನಿ?

ಮುಂದಿನ ವಾರ ಚುನಾವಣೆ: ರಾಜಕೀಯ ವಿಶ್ಲೇಷಕರ ಅಭಿಮತ

ಏಜೆನ್ಸೀಸ್
Published 16 ಮಾರ್ಚ್ 2021, 5:31 IST
Last Updated 16 ಮಾರ್ಚ್ 2021, 5:31 IST
ನಫ್ತಾಲಿ ಬೆನೆಟ್‌
ನಫ್ತಾಲಿ ಬೆನೆಟ್‌   

ಜೆರುಸಲೇಂ: ಇಸ್ರೇಲ್‌ನಲ್ಲಿ ಮುಂದಿನ ವಾರ ಚುನಾವಣೆ ನಡೆಯಲಿದ್ದು, ಮಾಜಿ ಉದ್ಯಮಿ, ಧಾರ್ಮಿಕತೆ ಹಾಗೂ ರಾಷ್ಡ್ರೀಯತೆ ಪ್ರತಿಪಾದಿಸುವ ಪಕ್ಷ ಯಾಮಿನಾ ಪಾರ್ಟಿ ನಾಯಕ ನಫ್ತಾಲಿ ಬೆನೆಟ್‌ ಅವರು ಹೊಸ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವರು ಎಂದು ವಿಶ್ಲೇಷಿಸಲಾಗುತ್ತಿದೆ. ಅಲ್ಲದೇ, ಬೆನೆಟ್‌ ಅವರೇ ಪ್ರಧಾನಿ ಆಗುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು ಎಂದೂ ಹೇಳಲಾಗುತ್ತಿದೆ.

ತಮ್ಮ ರಾಜಕೀಯ ಜೀವನದುದ್ದಕ್ಕೂ ಬಲಪಂಥೀಯ ವಿಚಾರಧಾರೆಯ ಮತದಾರರನ್ನೇ ಓಲೈಸುತ್ತಾ ಬಂದಿರುವ ಅವರು, ವೆಸ್ಟ್‌ ಬ್ಯಾಂಕ್‌ ಆಕ್ರಮಿತ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳುವ ಇಸ್ರೇಲ್‌ನ ನಿಲುವನ್ನು ಬೆಂಬಲಿಸುತ್ತಾರೆ.

ರಕ್ಷಣಾ ಸಚಿವರಾಗಿಯೂ ಕಾರ್ಯ ನಿರ್ವಹಿಸಿರುವ ಬೆನೆಟ್‌, ಮತ್ತೊಮ್ಮೆ ಅಧಿಕಾರಕ್ಕೆ ಬಂದಿದ್ದೇ ಆದಲ್ಲಿ ಉತ್ತಮ ಆಡಳಿತ ನೀಡುವ ಭರವಸೆ ನೀಡಿದ್ದಾರೆ. ಅದರಲ್ಲೂ, ಕೋವಿಡ್‌–19 ಪಿಡುಗಿನಿಂದಾಗಿ ಕುಸಿದಿರುವ ದೇಶದ ಆರ್ಥಿಕತೆಗೆ ಪುನಶ್ಚೇತನ ನೀಡುವುದಾಗಿಯೂ ಹೇಳಿ್ದ್ದಾರೆ.

ADVERTISEMENT

ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ತಮ್ಮ ಸ್ಟಾರ್ಟ್‌ಅಪ್‌ ಅನ್ನು 2005ರಲ್ಲಿ ಮಾರಾಟ ಮಾಡಿದ ನಂತರ ಅವರು ಸಕ್ರಿಯ ರಾಜಕಾರಣ ಪ್ರವೇಶಿಸಿದರು. ಆಗ ವಿರೋಧ ಪಕ್ಷದ ನಾಯಕರಾಗಿದ್ದ ಬೆಂಜಮಿನ್‌ ನೆತನ್ಯಾಹು ಅವರ ಪಕ್ಷ ಸೇರಿದ್ದ ಬೆನೆಟ್‌, ನೆತನ್ಯಾಹು ಅವರ ನಿಷ್ಠಾವಂತ ಅನುಯಾಯಿಯಾಗಿದ್ದರು. ಈಗ ಪ್ರಧಾನಿ ನೆತನ್ಯಾಹು ಅವರ ರಾಜಕೀಯ ವಿರೋಧಿಯಾಗಿರುವ ಅವರು, ಪ್ರಧಾನ ಮಂತ್ರಿ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ ಎಂದೂ ವಿಶ್ಲೇಷಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.