ಜರುಸಲೇಂ: ಹೋರಾಟಗಾರ್ತಿ ಗ್ರೆಟಾ ಥುನ್‌ಬರ್ಗ್ ಅವರನ್ನು ಇಸ್ರೇಲ್‌ನಿಂದ ಮಂಗಳವಾರ ಗಡೀಪಾರು ಮಾಡಲಾಗಿದೆ.
ಗಾಜಾಪಟ್ಟಿಗೆ ತೆರಳುತ್ತಿದ್ದ ಗ್ರೆಟಾ ಅವರನ್ನು ಬಂಧಿಸಿ, ಅವರಿದ್ದ ಹಡಗನ್ನು ವಶಕ್ಕೆ ಪಡೆದ ಮರುದಿನವೇ ಈ ಕ್ರಮ ಜರುಗಿಸಲಾಗಿದೆ.
ಗ್ರೆಟಾ ಅವರು ವಿಮಾನದ ಮೂಲಕ ಫ್ರಾನ್ಸ್‌ಗೆ ಪ್ರಯಾಣಿಸಿದರು. ನಂತರ ಅಲ್ಲಿಂದ ಅವರು ತಮ್ಮ ತವರು ಸ್ವೀಡನ್‌ಗೆ ತೆರಳಲಿದ್ದಾರೆ ಎಂದು ಇಸ್ರೇಲ್ ವಿದೇಶಾಂಗ ಸಚಿವಾಲಯ ‘ಎಕ್ಸ್’ನಲ್ಲಿ ತಿಳಿಸಿದೆ. ಗ್ರೆಟಾ ಅವರು ವಿಮಾನದ ಸೀಟಿನಲ್ಲಿ ಕುಳಿತಿರುವ ಫೋಟೊವನ್ನು ಅದು ಹಂಚಿಕೊಂಡಿದೆ.
ಇಸ್ರೇಲ್ ನಡೆಸುತ್ತಿರುವ ಸೇನಾ ಕಾರ್ಯಾಚರಣೆ ವಿರುದ್ಧ ಪ್ರತಿಭಟಿಸಲು ಬೆಂಬಲಿಗರೊಂದಿಗೆ ಗ್ರೆಟಾ ಅವರು ಗಾಜಾಪಟ್ಟಿಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಇಸ್ರೇಲ್ ಪಡೆಗಳು ಅವರನ್ನು ಬಂಧಿಸಿ, ಹಡಗನ್ನು ವಶಕ್ಕೆ ಪಡೆದಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.