ಗಾಜಾದಲ್ಲಿ ಮೃತಪಟ್ಟ ಪತ್ರಕರ್ತರೊಬ್ಬರ ಮುಂದೆ ಶೋಕಾಚರಣೆ
ದಾರ್ ಅಲ್ ಬಲಾ: ಇಸ್ರೇಲ್–ಹಮಾಸ್ ನಡುವಣ ಯುದ್ಧದಿಂದ ಗಾಜಾ ಪಟ್ಟಿಯಲ್ಲಿ ಮೃತಪಟ್ಟವರ ಸಂಖ್ಯೆ 45 ಸಾವಿರದ ಗಡಿ ದಾಟಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಗಾಜಾ ಆರೋಗ್ಯ ಸಚಿವಾಲಯವು ಮೃತಪಟ್ಟವರಲ್ಲಿ ನಾಗರಿಕರು ಎಷ್ಟಿದ್ದಾರೆ ಮತ್ತು ಹಮಾಸ್ ಸದಸ್ಯರ ಸಂಖ್ಯೆ ಎಷ್ಟು ಎಂಬುದನ್ನು ಹೇಳಿಲ್ಲ. ಆದರೆ, ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಇದ್ದಾರೆ ಎಂದು ಹೇಳಿದೆ. ಹಮಾಸ್‌ನ 17 ಸಾವಿರಕ್ಕೂ ಅಧಿಕ ಬಂಡುಕೋರರನ್ನು ಕೊಂದಿರುವುದಾಗಿ ಇಸ್ರೇಲ್ ಸೇನೆ ಹೇಳಿದೆಯಾದರೂ, ಅದಕ್ಕೆ ಯಾವುದೇ ಸಾಕ್ಷ್ಯ ಒದಗಿಸಿಲ್ಲ.
2023ರ ಅಕ್ಟೋಬರ್‌ನಲ್ಲಿ ಯುದ್ಧ ಆರಂಭವಾದ ಬಳಿಕ ಇದುವರೆಗೆ 45,028 ಮಂದಿ ಮೃತಪಟ್ಟಿದ್ದು, 1.06 ಲಕ್ಷ ಮಂದಿ ಗಾಯಗೊಂಡಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ರಕ್ಷಣಾ ತಂಡಗಳಿಗೆ ಎಲ್ಲ ಪ್ರದೇಶಗಳಲ್ಲೂ ಕಟ್ಟಡಗಳ ಅವಶೇಷಗಳಡಿ ಶೋಧ ಕಾರ್ಯ ನಡೆಸಲು ಆಗಿಲ್ಲ. ಆದ್ದರಿಂದ ನೂರಾರು ಶವಗಳು ಅವಶೇಷಗಳಡಿ ಸಿಲುಕಿರುವ ಸಾಧ್ಯತೆಯಿದ್ದು, ಸಾವಿನ ನಿಜವಾದ ಸಂಖ್ಯೆ ಇನ್ನೂ ಹೆಚ್ಚಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.