ಖಾನ್ ಯೂನಿಸ್ (ಗಾಜಾಪಟ್ಟಿ): ಇಸ್ರೇಲ್ ಮತ್ತು ಹಮಾಸ್ ನಡುವೆ ಎರಡನೇ ಹಂತದ ಕದನ ವಿರಾಮ ಜಾರಿಗೆ ಸಂಬಂಧಿಸಿದ ಮಾತುಕತೆ ಗುರುವಾರ ಆರಂಭವಾಗಿದೆ ಎಂದು ಮಧ್ಯಸ್ಥಿಕೆ ವಹಿಸಿರುವ ಈಜಿಪ್ಟ್ ತಿಳಿಸಿದೆ.
ಮೊದಲ ಹಂತದ ಕದನ ವಿರಾಮ ಜಾರಿ ಮಾತುಕತೆ ಶನಿವಾರ ಮುಕ್ತಾಯಗೊಳ್ಳಲಿದ್ದು, ಅದಕ್ಕೂ ಮುನ್ನ ಇಸ್ರೇಲ್, ಕತಾರ್ ಮತ್ತು ಅಮೆರಿಕದ ಅಧಿಕಾರಿಗಳು ಕೈರೋದಲ್ಲಿ ಕದನ ವಿರಾಮದ ಎರಡನೇ ಹಂತದ ಕುರಿತು ‘ತೀವ್ರ ಚರ್ಚೆಗಳನ್ನು’ ಪ್ರಾರಂಭಿಸಿದ್ದಾರೆ ಎಂದು ಈಜಿಪ್ಟ್‌ನ ರಾಜ್ಯ ಮಾಹಿತಿ ಸೇವೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.