ಸಾಂದರ್ಭಿಕ ಚಿತ್ರ
– ಎ.ಐ ಚಿತ್ರ
ಟೆಲ್ ಅವಿವ್: ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ವೈಮಾನಿಕ ನಿಯಂತ್ರಣ ಸಾಧಿಸಿದ್ದಾಗಿ ಇಸ್ರೇಲ್ ಸೇನೆ ಸೋಮವಾರ ತಿಳಿಸಿದೆ.
ಇರಾನ್‌ನ ವಾಯರಕ್ಷಣಾ ಹಾಗೂ ಕ್ಷಿಪಣಿ ವ್ಯವಸ್ಥೆಯನ್ನೇ ದುರ್ಬಲಗೊಳಿಸಿದ್ದೇವೆ. ಹೀಗಾಗಿ ನಾವು ಟೆಹ್ರಾನ್ ಮೇಲೆ ಯಾವುದೇ ಬೆದರಿಕೆ ಇಲ್ಲದೆ ವೈಮಾನಿಕ ಕಾರ್ಯಾಚರಣೆಗಳನ್ನು ನಡೆಸಬಹುದಾಗಿದೆ ಎಂದು ಅದು ತಿಳಿಸಿದೆ.
ಪಶ್ಚಿಮ ಇರಾನ್‌ನಿಂದ ಟೆಹ್ರಾನ್‌ವರೆಗಿನ ವಾಯುಸೀಮೆ ಇಸ್ರೇಲ್‌ನ ನಿಯಂತ್ರಣದಲ್ಲಿದೆ ಎಂದು ಸೇನೆ ಮಾಹಿತಿ ನೀಡಿದೆ.
ಇನ್ನೊಂದೆಡೆ ಇಸ್ರೇಲ್ ದಾಳಿಯಿಂದಾಗಿ ದೇಶದ ಪಶ್ಚಿಮ ಭಾಗದಲ್ಲಿರುವ ಆಸ್ಪತ್ರೆಯೊಂದಕ್ಕೆ ಗಂಭೀರ ಹಾನಿಯುಂಟಾಗಿದೆ ಎಂದು ಇರಾನ್ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ.
‘ಕೆರ್ಮನ್‌ಶಾ ನಗರ ಸಮೀಪದ ಕಾರ್ಯಾಗಾರದ ಮೇಲೆ ಜಿಯೋನಿಸ್ಟ್ ಕ್ರಿಮಿನಲ್ ಆಡಳಿತದ ದಾಳಿಯ ನಂತರ, ಫರಾಬಿ ಆಸ್ಪತ್ರೆ ಕೂಡ ಗಂಭೀರ ಹಾನಿಯನ್ನು ಅನುಭವಿದೆ’ ಎಂದು ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಸ್ಪತ್ರೆಯ ಗಾಜು ಒಡೆದು ಹೋಗಿರುವುದು, ಛಾವಣಿ ಕುಸಿದಿರುವುದು ಮತ್ತು ರೋಗಿಗಳ ಕೊಠಡಿಗಳಿಗೆ ವ್ಯಾಪಕ ಹಾನಿಯಾಗಿರುವುದನ್ನು ತೋರಿಸುವ ವಿಡಿಯೊವನ್ನು ಫಾರ್ಸ್ ಸುದ್ದಿ ಸಂಸ್ಥೆ ಪ್ರಸಾರ ಮಾಡಿದೆ.
(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.