ADVERTISEMENT

ಮಾಸ್ಕ್‌ ಧಾರಣೆ ರದ್ದು ಮಾಡಿದ ಇಸ್ರೇಲ್‌

ಏಜೆನ್ಸೀಸ್
Published 18 ಏಪ್ರಿಲ್ 2021, 20:21 IST
Last Updated 18 ಏಪ್ರಿಲ್ 2021, 20:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಜೆರುಸಲೇಮ್‌: ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು ಎಂಬ ನಿಯಮವನ್ನು ಇಸ್ರೇಲ್‌ ರದ್ದು ಮಾಡಿದೆ. ಅಲ್ಲದೇ, ದೇಶದಾದ್ಯಂತ ಶಾಲೆಗಳನ್ನು ಪುನರಾರಂಭಿಸಿದೆ.

ವ್ಯಾಪಕ ಲಸಿಕೆ ಕಾರ್ಯಕ್ರಮವನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಕೋವಿಡ್‌–19 ಪ್ರಸರಣ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಹಲವಾರು ನಿರ್ಬಂಧಗಳನ್ನು ಇಸ್ರೆಲ್‌ ಸಡಿಲಿಸಿದೆ.

ಒಳಾಂಗಣ ಹಾಗೂ ಭಾರಿ ಸಂಖ್ಯೆಯಲ್ಲಿ ಜನರು ಸೇರುವ ಸ್ಥಳಗಳಲ್ಲಿ ಮಾಸ್ಕ್‌ ಧರಿಸಬೇಕು ಎಂಬ ನಿಯಮ ಈಗಲೂ ಜಾರಿಯಲ್ಲಿದೆ ಎಂದು ಮೂಲಗಳು ಹೇಳಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.