ADVERTISEMENT

30 ಪ್ಯಾಲಿಸ್ಟೀನಿಯರ ಮೃತದೇಹ ಹಸ್ತಾಂತರಿಸಿದ ಇಸ್ರೇಲ್‌

ಏಜೆನ್ಸೀಸ್
Published 31 ಅಕ್ಟೋಬರ್ 2025, 16:07 IST
Last Updated 31 ಅಕ್ಟೋಬರ್ 2025, 16:07 IST
   

ಜೆರುಸಲೇಂ: ಇಸ್ರೇಲ್‌ ಸೇನೆಯು ಶುಕ್ರವಾರ 30 ಪ್ಯಾಲಿಸ್ಟೀನಿಯರ ಮೃತದೇಹಗಳನ್ನು ಹಸ್ತಾಂತರಿಸಿದೆ ಎಂದು ಗಾಜಾಪಟ್ಟಿಯ ರೆಡ್‌ಕ್ರಾಸ್‌ ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ. 

ಹಮಾಸ್‌ ಬಂಡುಕೋರರು, ಬಾಕಿ ಉಳಿದಿದ್ದ ಇಬ್ಬರು ಇಸ್ರೇಲ್‌ ಒತ್ತೆಯಾಳುಗಳ ಮೃತದೇಹವನ್ನು ಗುರುವಾರ ಹಸ್ತಾಂತರಿಸಿದ್ದರು. 

ಆಸ್ಪತ್ರೆಯಿಂದ ಮೃತದೇಹಗಳ ಅವಷೇಶಗಳನ್ನು ಪಡೆದು, ಇಸ್ರೇಲ್‌ನ ರಾಷ್ಟ್ರೀಯ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲಿ ಗುರುತುಪತ್ತೆ ಕಾರ್ಯ ನಡೆಯಲಿದೆ ಎಂದು ಇಸ್ರೇಲ್‌ ಸೇನೆ ಹೇಳಿದೆ.

ADVERTISEMENT

2023ರಲ್ಲಿ ಹಮಾಸ್‌ ಒತ್ತೆಯಾಳುಗಳನ್ನಾಗಿ ಮಾಡಿಕೊಂಡಿದ್ದ ಸಹರ್‌ ಬರೂಚ್ ಮತ್ತು ಅಮಿರಮ್‌ ಕೂಪರ್‌ ಅವರ ಮೃತದೇಹಗಳನ್ನು ಹಸ್ತಾಂತರಿಸಿದ್ದಾರೆ ಎಂದು ಇಸ್ರೇಲ್‌ ಪ್ರಧಾನಿ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.

ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಘೋಷಣೆಯಾದ ನಂತರ ಹಮಾಸ್‌ ಇದುವರೆಗೆ 17 ಒತ್ತೆಯಾಳುಗಳ ಮೃತದೇಹಗಳನ್ನು ಇಸ್ರೇಲ್‌ಗೆ ಹಸ್ತಾಂತರಿಸಿದೆ. ಇಸ್ರೇಲ್‌ 195 ಪ್ಯಾಲಿಸ್ಟೀನಿಯರ ಮೃತದೇಹಗಳನ್ನು ಹಸ್ತಾಂತರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.